ಶ್ರೇಯಸ್ ಮಂಜು ನಟನೆಯ ಪಡ್ಡೆಹುಲಿ ಲಾಂಚ್ ಸಾಂಗ್ ವಿಷ್ಣು ದಾದಾ ಗೆ ಸಮರ್ಪಣೆ

ಪಡ್ಡೆಹುಲಿ ಸಿನಿಮಾ ಮೂಲಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಬೆಳ್ಳಿತೆರೆ ಪ್ರವೇಶಿಸುತ್ತಿದ್ದು, ಈ ಸಿನಿಮಾದ ಲಾಂಚ್ ಹಾಡು ಫೆಬ್ರವರಿ 4 ರಂದು ರಿಲೀಸ್ ಆಗಲಿದೆ. ..
ಶ್ರೇಯಸ್ ಮಂಜು
ಶ್ರೇಯಸ್ ಮಂಜು
ಪಡ್ಡೆಹುಲಿ ಸಿನಿಮಾ ಮೂಲಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಮಂಜು ಬೆಳ್ಳಿತೆರೆ ಪ್ರವೇಶಿಸುತ್ತಿದ್ದು, ಈ ಸಿನಿಮಾದ ಲಾಂಚ್ ಹಾಡು ಫೆಬ್ರವರಿ 4 ರಂದು ರಿಲೀಸ್ ಆಗಲಿದೆ. 
ಸಿನಿಮಾದ ನಿರ್ದಿಷ್ಟ ಹಾಡು ಸಾಹಸಸಿಂಹ ವಿಷ್ಣವರ್ಧನ್ ಅವರಿಗೆ ಅರ್ಪಿಸಲಾಗುತ್ತಿದೆ.
ಗುರು ದೇಶಪಾಂಡೆ ನಿರ್ದೇಶನದ  ಈ ಸಿನಿಮಾದಲ್ಲಿ 'ನಾ ತುಂಬಾ ಹೊಸಬ ಬಾಸು' ಎಂಬ ಹಾಡಿದ್ದು, ಆ ಗೀತೆಯಲ್ಲಿ ಶ್ರೇಯಸ್‌ ಥೇಟ್‌ ಡಾ.ವಿಷ್ಣುವರ್ಧನ್‌ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಈ ಹಾಡನ್ನು ವಿಷ್ಣು ಅಭಿಮಾನಿಗಳಿಗೆ ಅರ್ಪಿಸುವುದಾಗಿ ಚಿತ್ರದ ನಿರ್ದೇಶಕ ಗುರು ದೇಶಪಾಂಡೆ ತಿಳಿಸಿದ್ದಾರೆ.
ಕರ್ನಾಟಕ ಸಂಸ್ಕೃತಿ ಇತಿಹಾಸ ಸಾರುವ ಈ ಸಿನಿಮಾವನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಲಾಗಿದೆ. ಮುರುಳಿ ಮಾಸ್ಚರ್  ನೃತ್ಯ ಸಂಯೋಜಿಸಿದ್ದಾರೆ. ಪಡ್ಡೆಹುಲಿ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com