400 ಥಿಯೇಟರ್ ಗಳಲ್ಲಿ ಸೀತಾರಾಮ ಕಲ್ಯಾಣ ರಿಲೀಸ್

ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾಗೆ ಸೋಮವಾರ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಹೀಗಾಗಿ ಚಿತ್ರತಂಡ ...
ನಿಖಿಲ್ ಕುಮಾರ್
ನಿಖಿಲ್ ಕುಮಾರ್
Updated on
ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ನಟನೆಯ ಸೀತಾರಾಮ ಕಲ್ಯಾಣ ಸಿನಿಮಾಗೆ ಸೋಮವಾರ  ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಹೀಗಾಗಿ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟಿಸಿದೆ.
ಹರ್ಷ ನಿರ್ದೇಶನದ ಸೀತಾರಾಮ ಕಲ್ಯಾಣ ಸಿನಿಮಾ  ಜನವರಿ 25 ರಂದು ರಿಲೀಸ್ ಆಗಲಿದೆ, ಕರ್ನಾಟಕದ 300 ಚಿತ್ರಮಂದಿರ ಸೇರಿದಂತೆ ಒಟ್ಟು 400 ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ, ಭಾರತದ ವಿವಿಧ ಭಾಗಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.
ಜಾಗ್ವಾರ್ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಿಖಿಲ್ ಕುಮಾರ್, ನಟಿಸಿರುವ ಸೀತರಾಮ ಕಲ್ಯಾಣ ಸಿನಿಮಾದಲ್ಲಿ ಹಲವು ಕಲಾವಿದರು ಅಭಿನಯಸಿದ್ದಾರೆ,. ಚಿತ್ರಕ್ಕೆ ಅನೂಪ್ ರುಬೆನ್  ಸಂಗೀತ ನೀಡಿದ್ದಾರೆ. 
ಜನವರಿ 19 ರಂದು ಮೈಸೂರಿನಲ್ಲಿ ಅದ್ದೂರಿ ಸಮಾರಂಭ ಆಯೋಜಿಸಿದ್ದು, ಸುಮಾರು 3 ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com