ನೆಟ್ ಫ್ಲಿಕ್ಸ್ ನಲ್ಲಿ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನಿರ್ದೇಶಕ ಗುರುದತ್ತ ಗಣಿಗ ಕನ್ನಡ ವೆಬ್ ಸಿರೀಸ್!

ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನಿರ್ದೇಶಕ ಗುರುದತ್ತ ಗಣಿಗ ನೆಟ್ ಫಿಕ್ಸ್ ಗಾಗಿ ಕನ್ನಡ ವೆಬ್ ಸಿರೀಸ್ ತಯಾರು ಮಾಡುತ್ತಿದ್ದಾರೆ....
ಗುರುದತ್ತ ಗಣಿಗ
ಗುರುದತ್ತ ಗಣಿಗ
Updated on
ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ನಿರ್ದೇಶಕ ಗುರುದತ್ತ  ಗಣಿಗ ನೆಟ್ ಫಿಕ್ಸ್ ಗಾಗಿ ಕನ್ನಡ ವೆಬ್ ಸಿರೀಸ್ ತಯಾರು ಮಾಡುತ್ತಿದ್ದಾರೆ.
ಕಾನ್ಸೆಪ್ಟ್ ಮೇಲೆ ಕೆಲಸ ಮಾಡುತ್ತಿರುವ ಗಣಿಗ ಪೈಲಟ್ ಎಪಿಸೋಡ್ ಗಾಗಿ  ಕಲಾವಿದರ ಹುಡುಕಾಟ ನಡೆಸಲಾಗುತ್ತಿದ್ದು, ಮುಂದಿನ ವಾರದಿಂದ ಶೂಟಿಂಗ್ ಆರಂಭವಾಗಲಿದೆ,
ಇದನ್ನು ನಾವು ಕ್ರಾಸ್ ಚೆಕ್ ಮಾಡಲು ಪ್ರಯತ್ನಿಸಿ ಗುರುದತ್ತ ಗಣಿಗ ಅವರನ್ನು ಸಂಪರ್ಕಿಸಿದಾಗ  ನಮಗೆ ಆಶ್ಟರ್ಯ ಕಾದಿತ್ತು, ವೆಬ್ ಸಿರೀಸ್ ಮಾಡಲು ನಾನು ಪ್ರಯತ್ನಿಸುತ್ತಿದ್ದೇನೆ, ಆದರೆ ಸದ್ಯಕ್ಕೆ ನಾನು ಹೆಚ್ಚಿಗೆ ಏನು ಹೇಳಲಾರೆ ಎಂದು ಹೇಳಿದ್ದಾರೆ.
ನಾನು ನೆಟ್ ಫಿಕ್ಸ್ ಜೊತೆ ಚರ್ಚಿಸಿದ್ದೇನೆ, ಅವರು ನನ್ನ ಕಾನ್ಸೆಪ್ಟ್ ಒಪ್ಪಿಕೊಂಡಿದ್ದಾರೆ, 20 ನಿಮಷದ ಎಪಿಸೋಡ್ ನೀಡಿದ್ದೇನೆ, ಎಲ್ಲವು ನಾನು ಅಂದುಕೊಂಡಂತೆ ಆದರೇ ಶೀಘ್ರವೇ ಪ್ರಾಜೆಕ್ಟ್ ಆರಂಭಿಸುತ್ತೇನೆ, ಕನ್ನಡ ಪ್ರೊಡಕ್ಷನ್ ಹೌಸ್ ಇದಕ್ಕಾಗಿ ನನ್ನನ್ನು ಸಂಪರ್ಕಿಸಿದೆ, ಎಲ್ಲವೂ ಮುಗಿದ ಮೇಲೆ ಅಧಿಕೃತವಾಗಿ ಪ್ರಕಟಿಸಲಾಗುವುದು. 
ವೆಬ್ ಸಿರೀಸ್ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಗುರುದತ್ತ, ನನ್ನ ಮುಂದಿನ ಪ್ರಾಜೆಕ್ಟ್ ಆರ್ಡಿನರಿ ಆಗಿರಬಾರದು, ಹೀಗಾಗಿ ಒಂದು ವಿಶೇಷ ಸಿನಿಮಾ ತಯಾರು ಮಾಡಲು ಈ ರೀತಿಯ ಪ್ರಾಜೆಕ್ಟ್ ಮಾಡಲು ಮುಂದಾಗಿರುವುದಾಗಿ ತಿಳಿಸಿದ್ದಾರೆ, ನಾನು ಕೆಲವು ಕಥೆಗಳನ್ನು ನಿರ್ಮಾಪಕರ ಜೊತೆ ಚರ್ಚಿಸಿದ್ದೇನೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com