ರಶ್ಮಿಕಾ ಮಂದಣ್ಣ ಬ್ರೇಕ್ ಅಪ್ ಬಗ್ಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ವಿಜಯ್ ದೇವರಕೊಂಡ ಗರಂ!

ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಬ್ರೇಕ್ ಅಪ್...
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ
Updated on
ಹೈದರಾಬಾದ್: ಗೀತಾ ಗೋವಿಂದಂ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದರು. ಈ ಚಿತ್ರದ ಬಳಿಕ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ನಡುವೆ ಬ್ರೇಕ್ ಅಪ್ ಆಗಿತ್ತು. ಬಳಿಕ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು ಕೇಳಿಬರುತ್ತಿದ್ದು ರಶ್ಮಿಕಾ ಬ್ರೇಕ್ ಅಪ್ ಗೆ ಇದೀಗ ವಿಜಯ್ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ. 
ಗೀತಾ ಗೋವಿಂದಂ ಬಳಿಕ ಇದೀಗ ಡಿಯರ್ ಕಾಮ್ರೆಡ್ ಚಿತ್ರದಲ್ಲಿ ರಶ್ಮಿಕಾ ಮತ್ತು ವಿಜಯ್ ತೆರೆ ಹಂಚಿಕೊಂಡಿದ್ದು ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಪ್ರಚಾರ ಕಾರ್ಯದ ವೇಳೆ ಮಾಧ್ಯಮದವರು ವಿಜಯ್ ಗೆ ರಶ್ಮಿಕಾ ಬ್ರೇಕ್ ಅಪ್ ಬಗ್ಗೆ ಕೇಳಿದ್ದಾರೆ. ಇದಕ್ಕೆ ಗರಂ ಆದ ವಿಜಯ್ ಈಗಲೂ ನನಗೆ ಯಾಕೆ ಬ್ರೇಕ್ ಅಪ್ ಆಗಿದೆ ಎಂದು ತಿಳಿದಿಲ್ಲ. 
ಇದು ಯಾರ ವ್ಯವಹಾರವೂ ಅಲ್ಲ. ನಾನು ನಿಮಗೆ ಉತ್ತರ ನೀಡುತ್ತಿರುವಂತೆ ನಿಮ್ಮ ಪ್ರಶ್ನೆ ನನಗಿನ್ನೂ ಅರ್ಥವಾಗಿಲ್ಲ. ಇದು ಮತ್ತೊಬ್ಬರ ವ್ಯವಹಾರವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಅದು ಮುಗಿದ ಅಧ್ಯಾಯ ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು ಕೇಳಬೇಡಿ ಎಂದು ಗರಂ ಆಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com