ಮನ ಮಿಡಿವ ಪೋಸ್ಟ್: ತಂದೆ ಕುರಿತು ಭಾವನಾತ್ಮಕ ಪೋಸ್ಟ್ ಹಾಕಿದ ಶೃತಿ ಪುತ್ರಿ!

ತಂದೆ-ತಾಯಿಗಳ ದೂರವಾಗಿರಬಹುದು ಆದರೆ ತಂದೆಯ ಮೇಲಿನ ವಾತ್ಸಲ್ಯ ಮಾತ್ರ ಮಕ್ಕಳಿಗೆ ಎಂದಿಗೂ ಕಡಿಮೆಯಾಗುವುದಿಲ್ಲ. ಅಂತೆ ನಟಿ ಶೃತಿ ಪುತ್ರಿ ಗೌರಿ ತಂದೆ, ಕನ್ನಡದ ಖ್ಯಾತ....
ಎಸ್ ಮಹೇಂದರ್-ಶೃತಿ-ಗೌರಿ
ಎಸ್ ಮಹೇಂದರ್-ಶೃತಿ-ಗೌರಿ
ಬೆಂಗಳೂರು: ತಂದೆ-ತಾಯಿಗಳ ದೂರವಾಗಿರಬಹುದು ಆದರೆ ತಂದೆಯ ಮೇಲಿನ ವಾತ್ಸಲ್ಯ ಮಾತ್ರ ಮಕ್ಕಳಿಗೆ ಎಂದಿಗೂ ಕಡಿಮೆಯಾಗುವುದಿಲ್ಲ. ಅಂತೆ ನಟಿ ಶೃತಿ ಪುತ್ರಿ ಗೌರಿ ತಂದೆ, ಕನ್ನಡದ ಖ್ಯಾತ ನಿರ್ದೇಶಕ ಎಸ್. ಮಹೇಂದರ್ ಜತೆಗಿನ ಬಾಲ್ಯದಲ್ಲಿನ ಫೋಟೋವನ್ನು ಶೇರ್ ಮಾಡಿ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.
ಎಸ್. ಮಹೇಂದರ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಂದೆ ಜೊತೆಗಿನ ಫೋಟೋವನ್ನು ಗೌರಿ ಶೃತಿ ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಅಪ್ಪ ಲವ್ ಯೂ. ನೀವು ಯಾವಾಗಲೂ ನನ್ನ ಮೊದಲ ಪ್ರೀತಿ, ನನ್ನ ನೆಚ್ಚಿನ ಹೀರೋ. ನಿನ್ನ ಮೇಲಿನ ನನ್ನ ಪ್ರೀತಿ, ನಮ್ಮಿಬ್ಬರ ಬಾಂಧವ್ಯದ ಬೆಸುಗೆಯನ್ನು ಯಾರೊಬ್ಬರೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಐ ಮಿಸ್ ಯೂ. ನಿನ್ನೊಂದಿಗೆ ಸಮಯ ಕಳೆಯಬೇಕೆಂದಿದ್ದೇನೆ. ಅದು ಶೀಘ್ರದಲ್ಲೇ ನಿಜವಾಗಲಿದೆ ಎಂದು ಭಾವನಾತ್ಮಕ ಪತ್ರ ಬರೆದಿದ್ದಾರೆ. ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
1998ರಲ್ಲಿ ಶೃತಿ ಹಾಗೂ ಮಹೇಂದರ್ ಪ್ರೇಮ ವಿವಾಹವಾಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ 2009ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ನಂತರ ಮಹೇಂದರ ಮೈಸೂರು ಮೂಲದ ಯುವತಿಯನ್ನು ವಿವಾಹವಾದರು. ಸದ್ಯ ಗೌರಿ ತಾಯಿ ಶೃತಿ ಜೊತೆಗಿದ್ದಾರೆ. ಸದ್ಯ ಗೌರಿ ಅವರು ತಮ್ಮ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com