ಶಿವರಾಜ್ ಕುಮಾರ್ ಆ್ಯಕ್ಷನ್ ಸನ್ನಿವೇಶಗಳಿಗೆ ಸದ್ಯಕ್ಕೆ ಬ್ರೇಕ್!

ನಟ ಶಿವರಾಜ್ ಕುಮಾರ್ ಆ್ಯಕ್ಷನ್ ಸನ್ನಿವೇಶಳಿಂದ ಅಂದರೆ ಫೈಟಿಂಗ್ ಸೀನ್ ಗಳಿಂದ ಸದ್ಯಕ್ಕೆ ದೂರವೇ ಉಳಿಯುತ್ತಿದ್ದಾರೆ,. ಬಲ ಭುಜ ಗಾಯಗೊಂಡಿರುವ ಕಾರಣದಿಂದಾಗಿ ...
ಶಿವರಾಜ್ ಕುಮಾರ್
ಶಿವರಾಜ್ ಕುಮಾರ್
ನಟ ಶಿವರಾಜ್ ಕುಮಾರ್ ಆ್ಯಕ್ಷನ್ ಸನ್ನಿವೇಶಳಿಂದ ಅಂದರೆ ಫೈಟಿಂಗ್ ಸೀನ್ ಗಳಿಂದ ಸದ್ಯಕ್ಕೆ ದೂರವೇ ಉಳಿಯುತ್ತಿದ್ದಾರೆ,. ಬಲ ಭುಜ ಗಾಯಗೊಂಡಿರುವ ಕಾರಣದಿಂದಾಗಿ ಸದ್ಯಕ್ಕೆ ಫೈಟಿಂಗ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುವಂತಿಲ್ಲ,
ಸ್ನಾಯು ಸೆಳೆತದ ಕಾರಣದಿಂದಾಗಿ ಸದ್ಯದಲ್ಲೇ ಶಿವರಾಜ್ ಕುಮಾರ್ ಲಂಡನ್ ಗೆ ತೆರಳಲಿದ್ದಾರೆ. ಜುಲೈ 10 ರಂದು ಅಲ್ಲಿ ಶಸ್ತ್ರಚಿಕಿತ್ಸೆ ನಡೆಯಲಿದೆ, ಈ ಹಿಂದೆ ಶಾರುಖ್ ಖಾನ್ ಮತ್ತು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದ ವೈದ್ಯರೇ ಶಿವರಾಜ್ ಕುಮಾರ್ ಗೂ ಚಿಕಿತ್ಸೆ ನೀಡಲಿದ್ದಾರೆ. ಜುಲೈ 12 ರಂದು ಶಿವರಾಜ್ ಕುಮಾರ್ ಹುಟ್ಟು ಹಬ್ಬವಿದೆ.
ಐಸ್ ಫ್ಲೋರ್ ನಲ್ಲಿ ವಾಕಿಂಗ್ ಮಾಡುವಾಗ ನಾನು ಜಾರಿಬಿದ್ದೆ. ಈ ವೇಳೆ ನನ್ನ ಇಡೀ ದೇಹದ ಭಾರವನ್ನು  ಭುಜದ ಮೇಲೆ ಬಿತ್ತು,  ಇದೊಂದು ಸಣ್ಣ ನೋವು ಎಂದು ನಾನು ಅಂದುಕೊಂಡೆ,ಬೇಗ ಚೇತರಿಸಿಕೊಳ್ಳಬಹುದು ಎಂದುಕೊಂಡೆ ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ. ಗಾಯದ ಹೊರತಾಗಿಯೂ ಶಿವರಾಜ್ ಕುಮಾರ್ ಪಿ.ವಾಸು ನಿರ್ದೇಶನದ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದಾರೆ,
ನನ್ನ ಕಮಿಂಟ್ ಮೆಂಟ್ ಗಳಿಂದ ನಾನು ಹಿಂದೆ ಸರಿಯುವುದಿಲ್ಲ, ನೋವು ನನಗೆ ಲೆಕ್ಕವೇ ಇಲ್ಲ, ಆಪರೇಷನ್ ಆದ ನಂತರ ನನಗೆ ಕೆಲವು ದಿನಗಳ ಕಾಲ ವಿಶ್ರಾಂತಿ ಬೇಕು, ಸುಮಾರು 3 ತಿಂಗಳ ಕಾಲ ನಾನು ಫೈಟಿಂಗ್ ದೃಶ್ಯಮಾಡುವಂತಿಲ್ಲ, ಹೀಗಾಗಿ ಲಂಡನ್ ಗೆ ತೆರಳುವ ಮುನ್ನ ಎಲ್ಲಾ ಶೂಟಿಂಗ್ ಪೂರ್ಣಗೊಳಿಸಿ ನಂತರ ಹೋಗುವುದಾಗಿ ಹೇಳಿದ್ದಾರೆ,
ಇನ್ನು ಹರ್ಷ ನಿರ್ದೇಶನದ ಭಜರಂಗಿ-2 ಸಿನಿಮಾದಲ್ಲಿ ಶಿವರಾಜ್ ಕುಮಾರ್ ನಟಿಸುತ್ತಿದ್ದು, ಜುಲೈ4 ರವರೆಗೆ ಮೊದಲ ಹಂತದ ಶೂಟಿಂಗ್ ಮುಗಿಸಿಕೊಡುವುದಾಗಿ ಶಿವರಾಜ್ ಕುಮಾರ್ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com