ರಾಮ್ ಚರಣ್, ಸಮಂತಾ ಅಕ್ಕಿನೇನಿ 'ರಂಗಸ್ಥಳಂ' ಕನ್ನಡ ರೀಮೇಕ್ ವಿತರಕ ಜಾಕ್ ಮಂಜು!

ಸುಕುಮಾರ್ ನಿರ್ದೇಶನದ ರಾಮ್ ಚರಣ್ ಹಾಗೂ ಸಮಂತಾ ಅಕ್ಕಿನೇನಿ ಅಭಿನಯದ 'ರಂಗಸ್ಥಳಂ' ಕನ್ನಡ ರೀಮೇಕ್ ವಿತರಣೆ ಹಕ್ಕನ್ನು ಜಾಕ್ ಮಂಜು ಪಡೆದುಕೊಂಡಿದ್ದಾರೆ.
'ರಂಗಸ್ಥಳಂ' ಚಿತ್ರದ ತುಣುಕು
'ರಂಗಸ್ಥಳಂ' ಚಿತ್ರದ ತುಣುಕು

ಬೆಂಗಳೂರು: ಸುಕುಮಾರ್ ನಿರ್ದೇಶನದ ರಾಮ್ ಚರಣ್ ಹಾಗೂ ಸಮಂತಾ ಅಕ್ಕಿನೇನಿ ಅಭಿನಯದ 'ರಂಗಸ್ಥಳಂ' ಕನ್ನಡ ರೀಮೇಕ್  ವಿತರಣೆ ಹಕ್ಕನ್ನು  ಜಾಕ್ ಮಂಜು ಪಡೆದುಕೊಂಡಿದ್ದಾರೆ.

ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ರಂಗಸ್ಥಳಂ' ತೆಲುಗು ಆವೃತ್ತಿ ಬಿಡುಗಡೆಯಾಗಿತ್ತು. ಒಂದು ವರ್ಷದ ನಂತರ ಮೈತ್ರಿ ಮೂವಿ ಮೇಕರ್ಸ್ ಪ್ರೊಢಕ್ಷನ್ ಹೌಸ್ ಈ ಚಿತ್ರವನ್ನು ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ರಿಮೇಕ್ ಮಾಡಿ ಬಿಡುಗಡೆ ಮಾಡುತ್ತಿದೆ. ಜಾಕ್ ಮಂಜು ಕರ್ನಾಟಕದಲ್ಲಿ ಈ  ಸಿನಿಮಾಕ್ಕೆ ವಿತರಕರಾಗಿದ್ದಾರೆ.

1957ರಲ್ಲಿ ಮಾಯಾಬಜರ್ ತೆಲುಗಿನ ಮೊದಲ ಚಿತ್ರ ಕನ್ನಡದಲ್ಲಿ ಬಿಡುಗಡೆಯಾಗಿತ್ತು. ಇದಾದ 60 ವರ್ಷಗಳ ನಂತರ ಎರಡನೇ ಚಿತ್ರವಾಗಿ ರಂಗಸ್ಥಳಂ ಕನ್ನಡ ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿದೆ.
ಈ ಪ್ರೊಢಕ್ಷನ್ ಹೌಸ್ ಸಹಯೋಗದೊಂದಿಗೆ ಅಜಿತ್ ಅಭಿನಯದ ತಮಿಳು ಚಿತ್ರಗಳಾದ ವಿವೇಗಂ, ಕಮಾಂಡೋ  ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಬಿಡುಗಡೆಯಾಗಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com