ಕವಲುದಾರಿಯಲ್ಲಿ ಸೊಂಟ ಬಳುಕಿಸಲಿರುವ ಸುಮನ್ ರಂಗನಾಥ್!

ಚೆಂದುಳ್ಳಿ ಚೆಲುವೆ ಸುಮನ್ ರಂಗನಾಥ್ ಅವರು ಹೀಗಲು ತಮ್ಮ ಸೌಂದರ್ಯ ರಾಶಿಯನ್ನು ಕಾಪಾಡಿಕೊಂಡು ಬಂದಿದ್ದು ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಸುಮನ್ ರಂಗನಾಥ್
ಸುಮನ್ ರಂಗನಾಥ್
Updated on
ಚೆಂದುಳ್ಳಿ ಚೆಲುವೆ ಸುಮನ್ ರಂಗನಾಥ್ ಅವರು ಹೀಗಲು ತಮ್ಮ ಸೌಂದರ್ಯ ರಾಶಿಯನ್ನು ಕಾಪಾಡಿಕೊಂಡು ಬಂದಿದ್ದು ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ನೀರ್ ದೋಸೆ ಮತ್ತು ಡಬಲ್ ಇಂಜಿನ್ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ಸುಮನ್ ರಂಗನಾಥ್ ಅವರು ಇದೀಗ ಹೇಮಂತ್ ಎಂ ರಾವ್ ನಿರ್ದೇಶನದ ಕವಲುದಾರಿಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಜೊತೆಗೆ ಚಿತ್ರದ ಹಾಡೊಂದರಲ್ಲೂ ಕಾಣಿಸಿಕೊಳ್ಳಲಿದ್ದಾರೆ ಸುಮನ್.  
ಗ್ರಾಮರ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸುಮನ್ ಅವರು ಈ ಚಿತ್ರದಲ್ಲಿ ಐಟಂ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಾಡನ್ನು ಧನಂಜಯ್ ರಂಜನ್ ಬರೆದಿದ್ದು ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ.
ಪುನೀತ್ ರಾಜಕುಮಾರ್ ಹೋಂ ಬ್ಯಾನರ್ ಪಿಆರ್ ಕೆ ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು ಚಿತ್ರದಲ್ಲಿ ರಿಶಿ, ಅನಂತ್ ನಾಗ್ ಮತ್ತು ರೋಶ್ನಿ ಪ್ರಕಾಶ್ ನಟಿಸುತ್ತಿದ್ದಾರೆ. ಏಪ್ರಿಲ್ 12ಕ್ಕೆ ಚಿತ್ರ ಬಿಡುಗಡೆಗೆ ಚಿತ್ರತಂಡ ತೀರ್ಮಾನಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com