ರಿಯಲ್ ಸ್ಟಾರ್ ಉಪೇಂದ್ರ ಈಗ ಬುದ್ದಿವಂತ-2 ಅವತಾರ

ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಪಿತಾಮಹ ಮತ್ತು ಬುದ್ದಿವಂತ 2 ಎಂಬ 2 ಟೈಟಲ್ ನಲ್ಲಿ ಬುದ್ದಿವಂತ-2 ಫೈನಲ್ ಆಗಿದೆ....
ಉಪೇಂದ್ರ
ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅವರ ಮುಂದಿನ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಪಿತಾಮಹ ಮತ್ತು ಬುದ್ದಿವಂತ 2 ಎಂಬ 2 ಟೈಟಲ್ ನಲ್ಲಿ ಬುದ್ದಿವಂತ-2 ಫೈನಲ್ ಆಗಿದೆ.
ಚಿತ್ರದಲ್ಲಿ ಉಪ್ಪಿಗೆ ಮೇಘನಾ ರಾಜ್ ಹಾಗೂ ಸೋನಲ್ ಇಬ್ಬರು ನಾಯಕಿಯರು ಜೊತೆಯಾಗಲಿದ್ದು, ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ವಿಲನ್ ಆಗಿ ನಟಿಸ್ತಿದ್ದಾರೆ. ಕ್ರಿಸ್ಟಲ್ ಪಾರ್ಕ್ ಚಿತ್ರವನ್ನ ನಿರ್ಮಾಣ ಮಾಡ್ತಿದೆ. ಈ ಚಿತ್ರ 2008ರಲ್ಲಿ ತೆರೆಕಂಡ ಬುದ್ಧಿವಂತ ಚಿತ್ರದ ಸೀಕ್ವೆಲ್ ಅಲ್ಲ ಎನ್ನಲಾಗಿದೆ.
ಸದ್ಯ ಉಪ್ಪಿ-ರಚಿತಾರಾಮ್ ಅಭಿನಯದ ಐ ಲವ್ ಯು ಸಿನಿಮಾ ಇದೇ ತಿಂಗಳ 24ರಂದು ರಿಲೀಸ್ ಆಗಲಿದೆ. ಅದಾದ ನಂತರ ಬುದ್ಧಿವಂತ-2 ಸಿನಿಮಾಗೆ ಉಪ್ಪಿ ತಯಾರಿ ನಡೆಸಬೇಕಾಗಿದೆ. ಉಪೇಂದ್ರ ದ್ವಿಪಾತ್ರದಲ್ಲಿ ನಟಿಸಲಿದ್ದಾರೆ,ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದ ಹೊಣೆ ಹೊತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com