ಸ್ಯಾಂಡಲ್ ವುಡ್ ನಲ್ಲಿ ಸದ್ಯ ರಚಿತಾ ರಾಮ್ ಫುಲ್ ಬ್ಯುಸಿ ನಟಿ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವೀರಂ ಅನ್ನೋ ಮತ್ತೊಂದು ಚಿತ್ರಕ್ಕೆ ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ.
ವಿಶೇಷ ಅಂದರೆ ಈ ಚಿತ್ರದಲ್ಲಿ ಡಿಂಪಲ್ಕ್ವೀನ್ ರಚಿತಾ ರಾಮ್ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ, ಖದರ್ ಕುಮಾರ್ ನಿರ್ದೇಶನದ ವೀರಂ ಸಿನಿಮಾ ಹೊಸ ವರ್ಷದಲ್ಲಿ ಸೆಟ್ಟೇರಲಿದ್ದು, ಪ್ರಜ್ವಲ್- ರಚಿತಾ ರಾಮ್ ಡ್ಯುಯೆಟ್ ನೋಡೋಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.
ಮುಂದಿನ ತಿಂಗಳ ಅಥವಾ 2020ರ ಪ್ರಾರಂಭದಲ್ಲಿ ‘ವೀರಂ’ ಸಿನಿಮಾ ಶುರು ಆಗಲಿದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಪ್ರಜ್ವಲ್ ಹಾಗೂ ರಚಿತಾ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿರುವ ರೌಡಿಸಂ ಸಿನಿಮಾ ಇದಾಗಿದೆ ಎಂದು ಹೇಳಲಾಗುತ್ತಿದೆ. ಶಶಿಧರ್ ಕೆಎಂ ಮತ್ತು ರಘು ಸಿಂಗಂ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
Advertisement