ನೋಡಿ 'ಕೆಜಿಎಫ್' ಮೋಡಿ! ರಾಕಿಬಾಯ್ ಭೇಟಿಯಾಗಲು ಫಿಲಿಫೈನ್ಸ್ ನಿಂದ ಬಂದ ಅಭಿಮಾನಿ

ಸ್ಯಾಂಡಲ್ ವುಡ್ ರಾಕಿ ಬಾಯ್ "ಕೆಜಿಎಫ್" ಚಿತ್ರ ಅವರಿಗೆ ಅದ್ಯಾವ ಪರಿ ಜನಪ್ರಿಯತೆ ತಂದುಕೊಟ್ಟಿದೆ ಎನ್ನಲು ಈ ಸುದ್ದಿಯೊಂದು ಚಿಕ್ಕ ಉದಾಹರಣೆ ಮಾತ್ರ!  ಫಿಲಿಫೈನ್ಸ್ ದೇಶದ ರಾಕಿಂಗ್ ಸ್ಟಾರ್ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟ ಯಶ್ ಭೇಟಿಯಾಗುವ ಸಲುವಾಗಿ ಕನ್ನಡ ಕಲಿತಿರುವುದು ಮಾತ್ರವಲ್ಲ ಇದೀಗ ಆತ ಭಾರತಕ್ಕೆ ಆಗಮಿಸಿದ್ದಾರೆ.
ರಾಕಿಬಾಯ್ ಭೇಟಿಯಾಗಲು ಫಿಲಿಫೈನ್ಸ್ ನಿಂದ ಬಂದ ಅಭಿಮಾನಿ
ರಾಕಿಬಾಯ್ ಭೇಟಿಯಾಗಲು ಫಿಲಿಫೈನ್ಸ್ ನಿಂದ ಬಂದ ಅಭಿಮಾನಿ
Updated on

ಸ್ಯಾಂಡಲ್ ವುಡ್ ರಾಕಿ ಬಾಯ್ "ಕೆಜಿಎಫ್" ಚಿತ್ರ ಅವರಿಗೆ ಅದ್ಯಾವ ಪರಿ ಜನಪ್ರಿಯತೆ ತಂದುಕೊಟ್ಟಿದೆ ಎನ್ನಲು ಈ ಸುದ್ದಿಯೊಂದು ಚಿಕ್ಕ ಉದಾಹರಣೆ ಮಾತ್ರ! ದೂರದ ಫಿಲಿಫೈನ್ಸ್ ದೇಶದ ರಾಕಿಂಗ್ ಸ್ಟಾರ್ ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟ ಯಶ್ ಭೇಟಿಯಾಗುವ ಸಲುವಾಗಿ ಕನ್ನಡ ಕಲಿತಿರುವುದು ಮಾತ್ರವಲ್ಲ ಇದೀಗ ಆತ ಭಾರತಕ್ಕೆ ಆಗಮಿಸಿದ್ದಾರೆ.

ಹೌದು! ಫಿಲಿಫೈನ್ಸ್ ದೇಶದ ಪೇಟೆ ಅಶೋಕ್ ಜೋರ್ನಲ್ ಎಂಬ ಅಭಿಮಾನಿ ಇದೀಗ ಬೆಂಗಳೂರಿಗೆ ಆಗಮಿಸಿದ್ದು "ನಾನು ಯಶ್ ಅಭಿಮಾನಿ, ಅವರನ್ನು ನೋಡಬೇಕು ಎಂದು ಬಂದಿದ್ದೇನೆ. ನನಗೆ ಸಹಾಯ ಮಾಡಿ" ಎಂದು ಅಶೋಕ್ ಜೋರ್ನಲ್ ಸಾಮಾಜಿಕ ತಾಣದಲ್ಲಿ ಮನವಿ ಮಾಡಿದ್ದಾರೆ.

ಏರ್‌ಪೋರ್ಟ್‌ ನರ್ಸ್ ಆಗಿ ಕೆಲಸ ಮಾಡುತ್ತಿರಿವ  ಅಶೋಕ್ ಜೋರ್ನಲ್ "ಕೆಜಿಎಫ್" ನಲ್ಲಿ ಯಶ ಅಭಿನಯ ಹಾಗೂ ಅವರು "ಯಶೋಮಾರ್ಗ" ಮೂಲಕ ಮಾಡುತ್ತಿರುವ ಸಮಾಜ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಇದೇ ನವೆಂಬರ್ 20ಕ್ಕೆ ಅವರು ತಮ್ಮ ಸ್ವಂತ ದೇಶಕ್ಕೆ ಮರಳಬೇಕಿದ್ದು ಅಷ್ಟರಲ್ಲಿ ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಬೇಕೆಂಬುದು ಅಶೋಕ್ ಜೋರ್ನಲ್ ಹಂಬಲವಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com