ರಗ್ಬಿ ಆಟಕ್ಕೂ 'ಯುವರತ್ನ' ಚಿತ್ರಕ್ಕೂ ಏನು ಸಂಬಂಧ? ಕುತೂಹಲ ಹೆಚ್ಚಿಸಿದ ನಿರ್ದೇಶಕ ಆನಂದರಾಮ್

ಪವರ್ ಸ್ಟಾರ್ ಪುನೀತ್ ರಾಜ್'ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟೀಸರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಸಿನಿಮಾ ಕುರಿತ ಚಿತ್ರವೊಂದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 
ರಗ್ಬಿ ಆಟಕ್ಕೂ 'ಯುವರತ್ನ' ಚಿತ್ರಕ್ಕೇನು ಸಂಬಂಧ? ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ ನಿರ್ದೇಶಕ ಆನಂದರಾಮ್
ರಗ್ಬಿ ಆಟಕ್ಕೂ 'ಯುವರತ್ನ' ಚಿತ್ರಕ್ಕೇನು ಸಂಬಂಧ? ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ ನಿರ್ದೇಶಕ ಆನಂದರಾಮ್
Updated on: 

ಪವರ್ ಸ್ಟಾರ್ ಪುನೀತ್ ರಾಜ್'ಕುಮಾರ್ ಅಭಿನಯದ ಬಹು ನಿರೀಕ್ಷಿತ ಯುವರತ್ನ ಚಿತ್ರದ ಟೀಸರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಸಿನಿಮಾ ಕುರಿತ ಚಿತ್ರವೊಂದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದೆ. 

ಯುವರತ್ನ ಚಿತ್ರದ ಚಿತ್ರವೊಂದರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಚಿತ್ರಕ್ಕೂ ರಗ್ಬಿ ಆಟಕ್ಕೇನು ಸಂಬಂಧವಿದೆ ಎಂಬ ಪ್ರಶ್ನೆ ಇದೀಗ ಪ್ರೇಕ್ಷಕರಲ್ಲಿ ಮೂಡತೊಡಗಿದೆ. 

ಚಿತ್ರದ ಮೂಲಕವೇ ಪ್ರೇಕ್ಷಕರಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿರುವ ನಿರ್ದೇಶಕ ಸಂತೋಷ್ ಆನಂದರಾಮ್ ಅವರು, ಚಿತ್ರದ ಟೀಸರ್'ನ್ನು ಗ್ರ್ಯಾಂಡ್ ಆಗಿ ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ.

ಆಯುಧ ಪೂಜೆ ದಿನದಂದೇ ಚಿತ್ರದ ಟೀಸರ್'ನ್ನು ಮೆಜೆಸ್ಟಿಕ್ ಬಳಿ ಇರುವ ಸಂತೋಷ್ ಚಿತ್ರಮಂದಿರಲ್ಲಿ ಸಂಜೆ 5.30ಕ್ಕೆ ಬಿಡುಗಡೆ ಮಾಡಲು ಚಿತ್ರದ ತಂಡ ನಿರ್ಧರಿಸಿದೆ. 

ಶಿಕ್ಷಣ ಮಾಫಿಯಾ ಬಗ್ಗೆ ಇರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಪುನೀತ್ ಅವರು ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪು ಅವರಿಗೆ ನಾಯಕಿಯಾಗಿ ಸಾಯೇಷಾ ಮಿಂಚಿದ್ದಾರೆ. ಇನ್ನು ಉಳಿದಂತೆ ಸೋನುಗೌಡ, ದಿಗಂತ್, ವಸಿಷ್ಠ ಸಿಂಹ, ರಾಧಿಕಾ, ಪ್ರಕಾಶ್ ರಾಜ್, ಸುಧಾರಾಣಿ, ಸಾಯಿ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿ ಕಾಣಿಸಿಕೊಂಡಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com