ಐ ಲವ್ ಯೂ ಯಶಸ್ಸಿನ ನಂತರ ಚಂದ್ರು- ಉಪೇಂದ್ರ ಮತ್ತೊಂದು ಸಿನಿಮಾ!

ಐ ಲವ್ ಯೂ ಸಿನಿಮಾ ಯಶಸ್ಸಿನ ನಂತರ ನಿರ್ದೇಶಕ ಆರ್ ಚಂದ್ರು ಮತ್ತು ಉಪೇಂದ್ರ ಮತ್ತೆ ಒಟ್ಟಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ.  ಐ ಲವ್ ಯೂ ಸಿನಿಮಾ 100 ದಿನದ ಸಂಭ್ರಮಾಚರಣೆಯಲ್ಲಿ ಚಿತ್ರದ ಹೆಸರು ಘೋಷಿಸಲಾಗುವುದು.
ಉಪೇಂದ್ರ
ಉಪೇಂದ್ರ
Updated on

ಐ ಲವ್ ಯೂ ಸಿನಿಮಾ ಯಶಸ್ಸಿನ ನಂತರ ನಿರ್ದೇಶಕ ಆರ್ ಚಂದ್ರು ಮತ್ತು ಉಪೇಂದ್ರ ಮತ್ತೆ ಒಟ್ಟಾಗಿ ಸಿನಿಮಾ ಮಾಡಲು ಮುಂದಾಗಿದ್ದಾರೆ.  ಐ ಲವ್ ಯೂ ಸಿನಿಮಾ 100 ದಿನದ ಸಂಭ್ರಮಾಚರಣೆಯಲ್ಲಿ ಚಿತ್ರದ ಹೆಸರು ಘೋಷಿಸಲಾಗುವುದು.

ಸೆಪ್ಟಂಬರ್ 14 ರಂದು ಐ ಲವ್ ಯೂ ಸಿನಿಮಾದ 100ನೇ ದಿನದ ಸಂಭ್ರಮಾಚರಣೆ ನಡೆಯಲಿದೆ, ಸೆಪ್ಟಂಬರ್ 18 ರಂದು ನಟ ಉಪೇಂದ್ರ ಅವರ ಹುಟ್ಟುಹಬ್ಬದಂದು ಎಲ್ಲಾ ಮಾಹಿತಿ ಬಹಿರಂಗ ವಾಗಿಸಲಿದ್ದಾರೆ,

ತಮ್ಮ ಮುಂದಿನ ಸಿನಿಮಾದಲ್ಲಿ ಅಂಡರ್ ವರ್ಲ್ಡ್ ಕಥೆ ತರಲಿದ್ದಾರೆ, ಈ ಸಿನಿಮಾ ದಕ್ಷಿಣ ಭಾರತದ 7 ಭಾಷೆಗಳಲ್ಲಿ ರಿಲೀಸ್ ಆಗಲಿದೆ. 7 ಭಾಷೆಗಳಲ್ಲಿ ಏಕಕಾಲದಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ,

ಈ ಸಂಬಂಧ ಉಪೇಂದ್ರ ಜೊತೆ ಚರ್ಚಿಸಿದ್ದು, ಉಪೇಂದ್ರ ಅವರಿಗಾಗಿ ಕಥೆ ಬರೆಯುತ್ತಿದ್ದಾರೆ.  ಎಷ್ಟು ಶೀಘ್ರವೋ ಅಷ್ಟು ಬೇಗ  ಶೂಟಿಂಗ್ ಆರಂಭಿಸುವುದಾಗಿ ಚಂದ್ರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com