ಸದ್ಯದಲ್ಲೇ 'ಬಿಗ್ ಬಾಸ್ ಕನ್ನಡ 7': ಅಶರೀರವಾಣಿಯೇ ಆಕರ್ಷಣೆ, ಪ್ರೋಮೋ ಮೇಕಿಂಗ್ ಇಲ್ಲಿದೆ

ಜನಪ್ರಿಯ 'ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದ ಪ್ರೊಮೋ ಚಿತ್ರೀಕರಣ ಇತ್ತೀಚೆಗಷ್ಟೇ ನಡೆದಿದೆ. 
ಬಿಗ್ ಬಾಸ್ ಕನ್ನಡ 7 ಪ್ರೊಮೋ
ಬಿಗ್ ಬಾಸ್ ಕನ್ನಡ 7 ಪ್ರೊಮೋ
Updated on

ಜನಪ್ರಿಯ 'ಬಿಗ್ ಬಾಸ್ ಕನ್ನಡ 7' ಕಾರ್ಯಕ್ರಮದ ಪ್ರೊಮೋ ಚಿತ್ರೀಕರಣ ಇತ್ತೀಚೆಗಷ್ಟೇ ನಡೆದಿದೆ. ಪ್ರೊಮೋ ಮೇಕಿಂಗ್ ವಿಡಿಯೋವನ್ನು ಕಲರ್ಸ್ ಕನ್ನಡ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ. 

ಈ ಬಾರಿ ಒಳಾಂಗಣ ಸೆಟ್ ನಲ್ಲಿ ಪ್ರೋಮೋ ಚಿತ್ರೀಕರಣ ಮಾಡಲಾಗಿದೆ. 'ಪೈಲ್ವಾನ್' ಬಿಡುಗಡೆಯ ಕೆಲಸಗಳ ನಡುವೆಯೂ ಸುದೀಪ್ ಪ್ರೊಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ.

ಕಾಫಿ ವಿತ್ ಕಿಚ್ಚ, ಪೂಜೆ, ಡಾಕ್ಟರ್ ಹೀಗೆ ಬಗೆಬಗೆಯಾಗಿ ಪ್ರೊಮೋವನ್ನು ಚಿತ್ರೀಕರಿಸಲಾಗಿದೆ. ಶೀಘ್ರದಲ್ಲೇ ಪ್ರೊಮೋ ಬಿಡುಗಡೆ ಆಗಲಿದೆ.

ಬಿಗ್ ಬಾಸ್ ಧ್ವನಿ ಹಿಂದಿನ ವ್ಯಕ್ತಿ ಯಾರು?

ಬಿಗ್ ಬಾಸ್ ಕನ್ನಡ ಶೋ ನೋಡುಗರ ಕುತೂಹಲವನ್ನು ಹಿಡಿದಿಡುವಲ್ಲಿ ಪ್ಲಸ್ ಪಾಯಿಂಟ್ ಅಂದರೆ ಬಿಗ್ ಬಾಸ್ ಧ್ವನಿ. ಶೋ ನಲ್ಲಿ ಪ್ರತಿದಿನವೂ ಈ ವಿಶೇಷ ಧ್ವನಿ ಎಲ್ಲರನ್ನೂ ಆಕರ್ಷಿಸುತ್ತಿದೆ.

ಕಂಚಿನ ಕಂಠದ ಈ ವ್ಯಕ್ತಿ ಕಾಣದಿದ್ದರೂ ಅವರ ಧ್ವನಿ ಮಾತ್ರ ಎಲ್ಲರಿಗೂ ಚಿರಪರಿಚಿತ, ಈ ಅಶರೀರವಾಣಿಯ ಹಿಂದಿನ ವ್ಯಕ್ತಿ ಶ್ರೀನಿವಾಸ್ ಪ್ರಸಾದ್ ಅವರು.

ಬಿಗ್ ಬಾಸ್ ವಾಯ್ಸ್ ಓವರ್ ಕಲಾವಿದರಾಗಿ ಕಳೆದ ನಾಲ್ಕು ಸೀಸನ್ ಗಳಲ್ಲು ನಿಮಗೆಲ್ಲ ಕೇಳಿಸುತ್ತಿದ್ದ ದನಿ ಶ್ರೀನಿವಾಸ್ ಪ್ರಸಾದ್ ಅವರದು. ಅವರು ಈ ಸೀಸನ್ ನಲ್ಲಿಯೂ ಇದೇ ರೀತಿ ತಮ್ಮ ಕಂಚಿನ ಕಂಠದಿಂದ ಗಮನ ಸೆಳೆಯಲಿದ್ದಾರೆ.

ಈ ಬಾರಿ ಕಲರ್ಸ್ ಸೂಪರ್ ಬದಲಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆಗಲಿದೆ. ಅಕ್ಟೋಬರ್ ಎರಡನೇ ವಾರದಿಂದ ಕಾರ್ಯಕ್ರಮ ಶುರುವಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com