ಪೈರಸಿ 'ಪೈಲ್ವಾನ್' ಅಂದರ್!

ನಟ ಕಿಚ್ಚಾ ಸುದೀಪ್ ಮತ್ತು ನಟ ದರ್ಶನ್ ಅಭಿಮಾನಿಗಳ ಫೇಸ್ ಬುಕ್ ವಾರ್ ಗೆ ಕಾರಣವಾಗಿದ್ದ ಪೈಲ್ವಾನ್ ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಸಾಮಾಜಿಕ ಜಾಲತಾಣದಲ್ಲಿ ಪೈಲ್ವಾನ್ ಚಿತ್ರದ ಲಿಂಕ್ ಹಾಕಿದ ಆರೋಪದ ಮೇರೆಗೆ ಯುವಕನ ಬಂಧನ

ಬೆಂಗಳೂರು: ನಟ ಕಿಚ್ಚಾ ಸುದೀಪ್ ಮತ್ತು ನಟ ದರ್ಶನ್ ಅಭಿಮಾನಿಗಳ ಫೇಸ್ ಬುಕ್ ವಾರ್ ಗೆ ಕಾರಣವಾಗಿದ್ದ ಪೈಲ್ವಾನ್ ಚಿತ್ರದ ಪೈರಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಓರ್ವ ಯುವಕನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾಧ್ಯಮಗಳು ವರದಿ ಮಾಡಿದ್ದು, ನೆಲಮಂಗಲದ ದಾಬಸ್ ಪೇಟೆಯ ಬಳಿ ಸಿಸಿಬಿ ಪೊಲೀಸರು ರಾಕೇಶ್ ವಿರಾಟ್ ಎಂಬ ಯುವಕನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಮೂಲಗಳ ಪ್ರಕಾರ ನಟ ಕಿಚ್ಚಾ ಸುದೀಪ್ ಅಭಿನಯದ ಬಹುಭಾಷಾ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪದ ಮೇರೆಗೆ ರಾಕೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ನೆಲಮಂಗಲ ಮೂಲದ 19 ವರ್ಷದ ರಾಕೇಶ್ ಬಂಧಿತ ಆರೋಪಿ. 'ಪೈಲ್ವಾನ್' ಚಿತ್ರ ಬಿಡುಗಡೆಯಾದ ದಿನವೇ ಸಂಪೂರ್ಣ ಚಲನಚಿತ್ರದ ಲಿಂಕ್ ಅನ್ನು ತನ್ನ ಫೇಸ್​ಬುಕ್​ ಖಾತೆಯಲ್ಲಿ ಶೇರ್ ಮಾಡಿ ವೈರಲ್​ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಗುರುವಾರ ಸಂಜೆ 3 ಗಂಟೆಗೆ ನೆಲಮಂಗಲ ತಾಲ್ಲೂಕಿನ ಇಮಚೇನಹಳ್ಳಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ.

'ಪೈಲ್ವಾನ್' ಚಿತ್ರದ ಲಿಂಕ್​ ಶೇರ್​ ಮಾಡಿದ್ದಲ್ಲದೆ, ತನ್ನ ಫೇಸ್​ಬುಕ್ ಸ್ಟೋರಿಯಲ್ಲಿ ಸಿನಿಮಾದ ಲಿಂಕ್ ಬೇಕಾದವರು ತನಗೆ ಇನ್​ಬಾಕ್ಸ್ ಮಾಡುವಂತೆ ಪೋಸ್ಟ್ ಮಾಡಿದ್ದ. ಈತನ ಮೂಲಕ ಆತನ ಇಬ್ಬರು ಫೇಸ್​ಬುಕ್ ಸ್ನೇಹಿತರು 'ಪೈಲ್ವಾನ್' ಚಿತ್ರದ ಲಿಂಕ್ ಶೇರ್ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇನ್ನು ಬಂಧಿತ ಯುವಕ ತನ್ನ ಫೇಸ್ ಬುಕ್ ಖಾತೆಯಲ್ಲಿ ತಾನು ಡಿಬಾಸ್ ಅಭಿಮಾನಿ ಎಂದು ಬರೆದುಕೊಂಡಿದ್ದಾನೆ. 

ಪೈಲ್ವಾನ್ ನಿರ್ಮಾಪಕರ ದೂರಿನ ಆಧಾರದ ಮೇಲೆ ಕ್ರಮ
ಇನ್ನು ಪೈಲ್ವಾನ್ ಚಿತ್ರದ ಪೈರಸಿ ಕುರಿತಂತೆ ಚಿತ್ರದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಅವರು ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೆ ದೂರಿನಲ್ಲಿ ಪೈಲ್ವಾನ್ ಚಿತ್ರದ ಪೈರಸಿ ಕುರಿತ ಸುಮಾರು 4 ಸಾವಿರ ಲಿಂಕ್ ಗಳನ್ನು ಕೂಡ ಪೊಲೀಸರಿಗೆ ನೀಡಿದ್ದರು. ಈ ಲಿಂಕ್ ಗಳನ್ನು ಆಧಾರಿಸಿ ತನಿಖೆ ನಡೆಸಿದ ಪೊಲೀಸರು ನಿನ್ನೆ ರಾತ್ರಿ ದಾಬಸ್ ಪೇಟೆಯಲ್ಲಿ ರಾಕೇಶ್ ವಿರಾಟ್ ನನ್ನು ಬಂಧಿಸಿದ್ದಾರೆ. ಡಿಸಿಪಿ ರವಿಕುಮಾರ್ ಮತ್ತು ಯಶವಂತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಈತನನ್ನುಬಂಧಿಸಿದ್ದಾರೆ.

ಪ್ರಸ್ತುತ ಈತನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಆದರೆ ಈತನಿಗೆ ಚಿತ್ರದ ಪೈರಸಿ ಲಿಂಕ್ ಹೇಗೆ ದೊರೆಯಿತು..? ಎಷ್ಟು ಮಂದಿಯೊಂದಿಗೆ ಈತ ಲಿಂಕ್ ಶೇರ್ ಮಾಡಿದ್ದಾನೆ..? ಎಂಬಿತ್ಯಾದಿ ಅಂಶಗಳ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com