ಕಿಚ್ಚ ಸುದೀಪ್ ಮನೆಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ!

ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶುಕ್ರವಾರ ಬೆಳಗ್ಗೆ ನಟ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ. 
ಪೊಲೀಸ್ ಆಯುಕ್ತ ಭಾಸ್ಕರ್ ರಾವ್-ಕಿಚ್ಚ ಸುದೀಪ್ (ಸಂಗ್ರಹ ಚಿತ್ರ)
ಪೊಲೀಸ್ ಆಯುಕ್ತ ಭಾಸ್ಕರ್ ರಾವ್-ಕಿಚ್ಚ ಸುದೀಪ್ (ಸಂಗ್ರಹ ಚಿತ್ರ)

ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶುಕ್ರವಾರ ಬೆಳಗ್ಗೆ ನಟ ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ್ದಾರೆ.
ಕಿಚ್ಚ ಸುದೀಪ್ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ ಪೈಲ್ವಾನ ಚಿತ್ರ ಪೈರಸಿಯಾದ ಘಟನೆ, ಫ್ಯಾನ್ಸ್ ವಾರ್ ಇಂತಹ ಬೆಳವಣಿಗೆಗಳ ಮಧ್ಯೆ ನಗರ ಪೊಲೀಸ್ ಆಯುಕ್ತರು ಸುದೀಪ್ ಮನೆಗೆ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. 


ಭಾಸ್ಕರ್ ರಾವ್ ಮತ್ತು ಕಿಚ್ಚ ಸುದೀಪ್ ಹಿಂದಿನಿಂದಲೂ ಆತ್ಮೀಯರು. ಹೀಗಾಗಿ ಸೌಹಾರ್ದಯುತವಾಗಿ ಭೇಟಿ ನೀಡಿರಬಹುದು ಎಂದು ಹೇಳಲಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.


ಭಾಸ್ಕರ್ ರಾವ್ ಅವರ ಭೇಟಿ ವೇಳೆ ತೆಗೆದ ಫೋಟೋವನ್ನು ಸುದೀಪ್ ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. 


ಇಂದು ಬೆಳಗ್ಗೆ ಕಿಚ್ಚನ ಮನೆ ಸುತ್ತಮುತ್ತ ಪೊಲೀಸ್ ಭದ್ರತೆ ತೀವ್ರವಾಯಿತು. ಇದನ್ನ ನೋಡಿದ ಅನೇಕರು ಏನಿರ ಬಹುದು ಎಂದು ಕುತೂಹಲ ವ್ಯಕ್ತಪಡಿಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com