ಗಂಡಸುತನ ತೋರಿಸಲು ಕತ್ತಲಾಗಬೇಕಿಲ್ಲ: ಸುದೀಪ್ ಖಡಕ್ ತಿರುಗೇಟು ಯಾರಿಗೆ?

ನಟ ಕಿಚ್ಚಾ ಸುದೀಪ್ ಅವರ ಇತ್ತೀಚೆಗಿನ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಿಚ್ಚನ ಟ್ವೀಟ್ ಹೇಳಿಕೆ ಕುರಿತು ಸಿನಿಪ್ರಿಯರಲ್ಲಿ ಚರ್ಚೆ ಆರಂಭವಾಗಿದೆ.

Published: 13th August 2019 01:07 AM  |   Last Updated: 13th August 2019 01:07 AM   |  A+A-


Actor sudeep

ಸಂಗ್ರಹ ಚಿತ್ರ

Posted By : Srinivasamurthy VN
Source : Online Desk

ಬೆಂಗಳೂರು: ನಟ ಕಿಚ್ಚಾ ಸುದೀಪ್ ಅವರ ಇತ್ತೀಚೆಗಿನ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಿಚ್ಚನ ಟ್ವೀಟ್ ಹೇಳಿಕೆ ಕುರಿತು ಸಿನಿಪ್ರಿಯರಲ್ಲಿ ಚರ್ಚೆ ಆರಂಭವಾಗಿದೆ.

ಹೌದು.. ನಟ ಕಿಚ್ಚಾ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟಿವ್ ಆಗಿರುತ್ತಾರೆ. ಆದರೆ ಸುದೀಪ್ ಈ ವರೆಗೂ ಯಾರಿಗೂ ಟಾಂಗ್ ನೀಡುವ ಉದ್ದೇಶದಿಂದ ಟ್ವಿಟರ್ ಬಳಕೆ ಮಾಡಿಲ್ಲ. ಆದರೆ ಅವರ ಒಂದು ಟ್ವೀಟ್ ಈ ಕುರಿತಂತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಇಷ್ಟಕ್ಕೂ ಆ ಟ್ವೀಟ್ ನಲ್ಲಿ ಏನಿದೆ ಗೊತ್ತಾ?
'ಒಬ್ಬ ನಿಜವಾದ ಪುರುಷ ತಾನು ಗಂಡಸು ಎಂದು ಪ್ರೂವ್​ ಮಾಡಲು ಮದ್ಯಪಾನ ಮಾಡುವುದಿಲ್ಲ. ಹಾಗೇ ಕತ್ತಲಾಗಲಿ ಎಂದು ಕಾಯುವುದೂ ಇಲ್ಲ.’ ಇದು ನಾನು ಎಲ್ಲೋ ಓದಿದ ಸುಂದರ ಸಾಲುಗಳು. ತುಂಬ ಅದ್ಭುತವಾದ ಅರ್ಥ ಕೊಡುತ್ತದೆ ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. 

ಹಾಗೇ ತಮ್ಮ ಫೋಟೋ ಇರುವ ಚಿತ್ರವನ್ನು ಪೋಸ್ಟ್​ ಮಾಡಿದ್ದು, ಅದರಲ್ಲಿ ಕೂಡ ನಾಲ್ಕು ಸಾಲು ಬರೆದಿದ್ದು, 'ಏನನ್ನೋ ಸಾಬೀತು ಮಾಡುವುದಕ್ಕೋಸ್ಕರ ನಾನು ಯಾರೆಂದರೆ ಅವರ ಜತೆಗೆ ಹೋರಾಟಕ್ಕೆ ಇಳಿಯುವುದಿಲ್ಲ. ನನ್ನ ಎದುರಾಳಿಗೆ ನನ್ನೊಂದಿಗೆ ಫೈಟ್​ ಮಾಡಲು ಯೋಗ್ಯತೆ ಇರಬೇಕು. ಅಂದಾಗ ಮಾತ್ರ ನಾನೂ ಫೈಟ್​ ಮಾಡುತ್ತೇನೆ' ಎಂದು ಹೇಳಿದ್ದಾರೆ.

Stay up to date on all the latest ಸಿನಿಮಾ ಸುದ್ದಿ news with The Kannadaprabha App. Download now
facebook twitter whatsapp