'ಫ್ಯಾಂಟಮ್'ನಲ್ಲಿ ಕಿಚ್ಚ ಸುದೀಪ್ ಗೆ ಸ್ಟೆಪ್ ಹೇಳಿಕೊಡುತ್ತಿರುವ ಜಾನಿ ಮಾಸ್ಟರ್

ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಇದೀಗ ಹಾಡಿನ ಚಿತ್ರೀಕರಣದಲ್ಲಿ ಮಕ್ಕಳು ಸುದೀಪ್ ಜತೆಯಾಗಿದ್ದಾರೆ.
ಜಾನಿ ಮಾಸ್ಟರ್, ಕಿಚ್ಚ ಸುದೀಪ್
ಜಾನಿ ಮಾಸ್ಟರ್, ಕಿಚ್ಚ ಸುದೀಪ್
Updated on

ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೊದಲ್ಲಿ ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಚಿತ್ರೀಕರಣ ಸಾಗುತ್ತಿದೆ. ಇದೀಗ ಹಾಡಿನ ಚಿತ್ರೀಕರಣದಲ್ಲಿ ಮಕ್ಕಳು ಸುದೀಪ್ ಜತೆಯಾಗಿದ್ದಾರೆ.

ಜಾನಿ ಮಾಸ್ಟರ್ ಕೊರಿಯಾಗ್ರಫಿಯಲ್ಲಿ ಚಿತ್ರೀಕರಣವಾಗುತ್ತಿದೆ. ಈ ಹಾಡಿಗಾಗಿ ಕಲಾ ನಿರ್ದೇಶಕ ಶಿವಕುಮಾರ್ ಹಾಕಿರುವ ಹೊಸ ಸೆಟ್ ನಲ್ಲಿ 5 ದಿನಗಳ ಶೆಡ್ಯೂಲ್ ನಲ್ಲಿ ಹಾಡಿನ ಶೂಟಿಂಗ್ ನಡೆಯುತ್ತಿದೆ. ಇದಕ್ಕೆ ನಿರ್ದೇಶಕ ಅನೂಪ್ ಭಂಡಾರಿಯವರೇ ಸಾಹಿತ್ಯ ಬರೆದಿದ್ದಾರೆ. ಸಂಗೀತ ಬಿ ಅಜನೀಶ್ ಲೋಕನಾಥ್, ಕ್ಯಾಮರಾ ಕೈಚಳಕ ವಿಲಿಯಮ್ ಡೇವಿಡ್ ಅವರದ್ದಿದೆ.

ಸಾಹಸ ಪ್ರಧಾನವಾದ ಚಿತ್ರದ ಶೂಟಿಂಗ್ ಮಲ್ಶೇಜ್ ಘಾಟ್ ಮತ್ತು ಮಹಾಬಲೇಶ್ವರಗಳಲ್ಲಿ ಆರಂಭವಾದ ಚಿತ್ರದ ಶೂಟಿಂಗ್ ನ ಎರಡನೇ ಶೆಡ್ಯೂಲ್ ಬೆಂಗಳೂರಿನಲ್ಲಿ ನಡೆಯಿತು.ಲಾಕ್ ಡೌನ್ ನಂತರ ಜುಲೈ 16ರಂದು ಮತ್ತೆ ಚಿತ್ರೀಕರಣ ಆರಂಭಿಸಿ ಶೇಕಡಾ 40 ಭಾಗ ಮುಗಿದಿದೆ. ಶಾಲಿನಿ ಆಟ್ಸ್ಸ್ ಬ್ಯಾನರ್ ನಡಿ ಮಂಜುನಾಥ್ ಗೌಡ ನಿರ್ಮಿಸುತ್ತಿದ್ದಾರೆ. ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಕೂಡ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com