ಬೇರ್ ಗ್ರಿಲ್ಸ್ ಜೊತೆಗೆ ರಜನಿ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಟೀಸರ್  ಬಿಡುಗಡೆ

ಡಿಸ್ಕವರಿ ವಾಹಿನಿಯ 'ಮ್ಯಾನ್ ವರ್ಸಸ್ ವೈಲ್ಡ್' ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ಸೂಪರ್ ಸ್ಟಾರ್ ರಜನಿ ಕಾಂತ್ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಕಾರ್ಯಕ್ರಮದ ಟೀಸರ್ ಬಿಡುಗಡೆ ಆಗಿದೆ.
ರಜನಿಕಾಂತ್  , ಬೇರ್ ಗ್ರಿಲ್ಸ್
ರಜನಿಕಾಂತ್  , ಬೇರ್ ಗ್ರಿಲ್ಸ್
Updated on

ನವದೆಹಲಿ: ಡಿಸ್ಕವರಿ ವಾಹಿನಿಯ 'ಮ್ಯಾನ್ ವರ್ಸಸ್ ವೈಲ್ಡ್' ನಿರೂಪಕ ಬೇರ್ ಗ್ರಿಲ್ಸ್ ಜೊತೆಗೆ ಸೂಪರ್ ಸ್ಟಾರ್ ರಜನಿ ಕಾಂತ್ ಬಂಡೀಪುರ ಸುತ್ತಿರುವ 'ಇಂಟು ದಿ ವೈಲ್ಡ್ ' ಕಾರ್ಯಕ್ರಮದ ಟೀಸರ್ ಬಿಡುಗಡೆ ಆಗಿದೆ.

'ಇಂಟು ದಿ ವೈಲ್ಡ್ ' ಕಾರ್ಯಕ್ರಮ ಮಾರ್ಚ್ 23 ರಂದು ರಾತ್ರಿ 8 ಗಂಟೆಗೆ ಡಿಸ್ಕವರಿ ವಾಹಿನಿಯಲ್ಲಿ ಪ್ರಸಾರವಾಗಲಿದೆ. 40 ಸೆಕೆಂಡ್ ಗಳ ಈ ಟೀಸರ್ ನಲ್ಲಿ ರಜನಿಕಾಂತ್  , ಬೇರ್ ಗ್ರಿಲ್ಸ್ ಜೊತೆಗೆ ಬಂಡೀಪುರದಲ್ಲಿನ ಜಿಂಕೆಗಳು, ಹುಲಿಗಳು, ಆನೆಗಳನ್ನು ಕಾಣಬಹುದಾಗಿದೆ.

ಜಲಸಂರಕ್ಷಣೆಯ ಸಂದೇಶವನ್ನು ದೇಶದ ಜನತೆಗೆ ತಲುಪಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಕೂಡಾ ಗ್ರಿಲ್ಸ್ ಜೊತೆಗೆ ಉತ್ತರಾ ಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಭರ್ಜಿ ಹಿಡಿದು ಹೆಜ್ಜೆ ಹಾಕಿದ್ದರು. ವಿಶ್ವದ 180 ದೇಶಗಳಲ್ಲಿ ಏಕಕಾಲಕ್ಕೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com