ವರದಕ್ಷಿಣೆ ಕಿರುಕುಳ, ನಟಿ ರಮ್ಯಾರಿಂದ ಪೋಲೀಸರಿಗೆ ದೂರು

ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ಬೆಂಗಳೂರು ಪೋಲೀಸರಿಗೆ ದುರು ಸಲ್ಲಿಸಿದ್ದಾರೆ. ಪತಿ ನನಗೆ ವರದಕ್ಷಿಣೆ ತರುವಂತೆ ಸತತ ಪೀಡಿಸುತ್ತಿದ್ದಾನೆ ಎಂದು ತಮಿಳಿನ ನಟಿ ರಮ್ಯಾ ಬೆಂಗಳೂರು ಕೊಡಿಗೇಹಳ್ಳಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ನಟಿ ರಮ್ಯಾ ಬೆಂಗಳೂರು ಪೋಲೀಸರಿಗೆ ದುರು ಸಲ್ಲಿಸಿದ್ದಾರೆ. ಪತಿ ನನಗೆ ವರದಕ್ಷಿಣೆ ತರುವಂತೆ ಸತತವಾಗಿ ಪೀಡಿಸುತ್ತಿದ್ದಾನೆ ಎಂದು ತಮಿಳಿನ ನಟಿ ರಮ್ಯಾ ಬೆಂಗಳೂರು ಕೊಡಿಗೇಹಳ್ಳಿ ಪೋಲೀಸರಿಗೆ ದೂರು ಸಲ್ಲಿಸಿದ್ದಾರೆ.

2017ರಲ್ಲಿ  ಕೊರಿಯೋಗ್ರಾಫರ್ ವರದರಾಜನ್ ಅವರೊಂದಿಗೆ ವಿವಾಹವಾಗಿದ್ದ ರಮ್ಯಾ ತಮ್ಮ ವಿವಾಹದ ವೇಳೆ ಪತಿಗೆ ದಲ್ಲಿ 25 ಲಕ್ಷ ಮೌಲ್ಯದ ಸೈಟ್, ಚಿನ್ನಾಭರಣ ಮತ್ತು ನಗದನ್ನು ವರದಕ್ಷಿಣೆಯಾಗಿ ನೀಡಿದ್ದರು.

ಆದರೆ ಇದೀಗ ಪತಿ ತಾನು ಡ್ಯಾನ್ಸ್ ಅಕಾಡಮಿ ತೆರೆಯಬೇಕೆಂದು ನೆಪ ಹೇಳಿ ಹೆಚ್ಚಿನ ಹಣ ತರುವಂತೆ ಪೀಡಿಸುತ್ತಿದ್ದಾರೆ. ಪತಿ ಹಾಗೂ ಆತನ ಕುಟುಂಬ ನನ್ನ ಮದುವೆಯಾದ ಅಂತರವೂ ಅವರ ಮನೆಗೆ ಕರೆದೊಯ್ಯದೆ ಹಿಂಸಿಸಿದ್ದರು. ಅಲ್ಲದೆ ಪತಿಗೆ ಸಹ ನೃತ್ಯಪಟು ಒಬ್ಬರ ಜತೆ ಅಕ್ರಮ ಸಂಬಧವೂ ಇದೆ ಎಂದು ರಮ್ಯಾ ದೂರಿನಲ್ಲಿ ಹೇಳಿದ್ದಾರೆ.

‘ಮಾಂಡಾ ಮಾಯಿಲ’ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ವಿಜೇತರಾಗಿದ್ದ ರಮ್ಯಾ ಅವರ ದೂರು ದಾಖಲಿಸಿಕೊಂಡಿರುವ ಪೋಲೀಸರು ತನಿಖೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com