ಜಂಟಲ್ ಮ್ಯಾನ್ ರಿಮೇಕ್ ರೈಟ್ಸ್ ಗೆ ಹೆಚ್ಚಿದ ಡಿಮ್ಯಾಂಡ್

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಜನವರಿ 31ರಂದು ರಿಲೀಸ್ ಆಗಲಿದೆ, ರಿಲೀಸ್ ಗು ಮನ್ನವೇ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ಜಂಟಲ್ ಮ್ಯಾನ್ ಸಿನಿಮಾ ಸ್ಟಿಲ್
ಜಂಟಲ್ ಮ್ಯಾನ್ ಸಿನಿಮಾ ಸ್ಟಿಲ್
Updated on

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಜನವರಿ 31ರಂದು ರಿಲೀಸ್ ಆಗಲಿದೆ, ರಿಲೀಸ್ ಗು ಮನ್ನವೇ ಸಿನಿಮಾ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.

ಕಳೆದ ವಾರವಷ್ಟೇ ಜಂಟಲ್ ಮ್ಯಾನ್  ಟ್ರೇಲರ್ ರಿಲೀಸ್ ಆಗಿದ್ದು, ಹಲವರ ಗಮನ ಸೆಳೆದಿದೆ, ಹೀಗಾಗಿ ತೆಲುಗು ಮತ್ತು ತಮಿಳು ನಿರ್ಮಾಪಕರು ರಿಮೇಕ್ ರೈಟ್ಸ್ ಗಾಗಿ ಮುಗಿಬಿದ್ದಿದ್ದಾರೆ.  ನಟ ಸಾಯಿಕುಮಾರ್, ಮ್ಯಾನೇಜರ್ ತಮಿಳು ಮತ್ತು ತೆಲುಗಿನಲ್ಲಿ ಸಿನಿಮಾ ಮಾಡಲು ರಿಮೇಕ್ ರೈಟ್ಸ್ ಗಾಗಿ ಕೇಳುತ್ತಿದ್ದಾರೆ.

ಜಂಟಲ್ ಮ್ಯಾನ್ ಕಥೆ ನಮಗೆ ತುಂಬಾ ಇಷ್ಟವಾಗಿದೆ ಎಂದು ಸಾಯಿಕುಮಾರ್ ತಿಳಿಸಿದ್ದಾರೆ, ಸಂಕ್ರಾಂತಿ ನಂತರ ತೆಲುಗಿನಲ್ಲಿ  ರಿಮೇಕ್ ಮಾಡಲಾಗುತ್ತದೆ. ತಮಿಳಿನಲ್ಲಿ  ವಿಶಾಲ್  ರಿಮೇಕ್ ರೈಟ್ಸ್ ತೆಗೆದುಕೊಳ್ಳಲು ಮುಂದಾಗಿದ್ದಾರೆ. ದಿನಕ್ಕೆ 18 ಗಂಟೆ  ನಿದ್ದೆ  ಮಾಡುವವರ ಕುರಿತ ಸ್ಟೋರಿ ಇದಾಗಿದೆ.  ಜೊತೆಗೆ ಮಾಫಿಯಾ ಕುರಿತ ಕಥೆ ಇದಾಗಿದೆ.  ಇದರ ಜೊತೆಗೆ ಇತರ ನಿರ್ಮಾಪಕರು ಕೂಡ ಆಸಕ್ತಿ ತೋರಿಸುತ್ತಿದ್ದಾರೆ. 

ಜಬೇಶ್ ಕುಮಾರ್ ಜಂಟಲ್ ಮ್ಯಾನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಡ್ರಗ್ ಮಾಫಿಯಾ ಸಂಬಂಧಿಸಿದ ಕತೆಯನ್ನೊಳಗೊಂಡಿದೆ. ನಿಶ್ವಿಕಾ ನಾಯ್ಡು ಮತ್ತು ಸಂಚಾರಿ ವಿಜಯ್ ಕೂಡ ಅಭಿನಯಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com