ಅಂತಿಮ ಹಂತದ ಶೂಟಿಂಗ್ ಮುಗಿಸಿದ ರಾಬರ್ಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಅಂತಿಮ ಹಂತದ ಶೂಟಿಂಗ್ ಮುಗಿಸಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸುಮಾರು 108 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ.
ರಾಬರ್ಟ್ ಸ್ಟಿಲ್
ರಾಬರ್ಟ್ ಸ್ಟಿಲ್
Updated on: 

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಅಂತಿಮ ಹಂತದ ಶೂಟಿಂಗ್ ಮುಗಿಸಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸುಮಾರು 108 ದಿನಗಳ ಕಾಲ ಚಿತ್ರೀಕರಣ ಮುಗಿಸಿದೆ.

180 ಮಂದಿ ಸದಸ್ಯರನ್ನೊಳಗೊಂಡ ಚಿತ್ರ ತಂಡ ಬೆಂಗಳೂರು ಸೇರಿದತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆ.  ಉಮಾಪತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ ಗೌಡ  ನಿರ್ಮಾಣ ಮಾಡಿದ್ದಾರೆ.

ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿನಿಮಾ ಬೇಸಿಗೆ ರಜೆಗೆ ರಿಲೀಸ್ ಆಗುವ ಸಾಧ್ಯತೆಯಿದೆ, ಹಲವರಿಗೆ ಅಚ್ಚರಿಯಾಯಿತು, ಇಷ್ಟು ದೊಡ್ಡ ಪ್ರಾಜೆಕ್ಟ್ ಅನ್ನು ಕಡಿಮೆ ಸಮಯದಲ್ಲಿ ಮುಗಿಸಿದ್ದು, ಏಪ್ರಿಲ್ 9 ರಂದು ಬಿಡುಗಡೆ ಮಾಡಲೂ ತಯಾರಿ ನಡೆಸಲಾಗುತ್ತಿದೆ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ.

ಒಬ್ಬ ನಿರ್ದೇಶಕನಾಗಿ ನಾನು ಪ್ಲಾನ್ ಮಾಡಿರಬಹುದು,  ಆದರೆ ಅದನ್ನು ಜಾರಿಗೊಳಿಸಲು ಜನರ ಸಹಕಾರ ಅಗತ್ಯ. ನಾಯಕ ಮತ್ತು ನಿರ್ಮಾಪಕರ ಸಹಾಯದಿಂದ  ಇಷ್ಟು ಬೇಗ ಶೂಟಿಂಗ್ ಮುಗಿಸಲಾಗಿದೆ, ದರ್ಶನ್ ಮತ್ತು ಉಮಾಪತಿ ನನ್ನ ಮೇಲೆ ನಂಬಿಕೆಯಿಟ್ಟು ಕೆಲಸ ನಿರ್ವಹಿಸಲು ಬಿಟ್ಟಿದ್ದಾರೆ.  ಇದೊಂದು ಬೃಹತ್ ಬಜೆಟ್ ಸಿನಿಮಾವಾಗಿದ್ದು, ಹಲವು ಸ್ಟಾರ್ ಗಳು ನಟಿಸಿದ್ದಾರೆ. 

ಜಗಪತಿ ಬಾಬು, ವಿನೋದ್ ಪ್ರಭಾಕರ್, ಸೋನಾಲ್ ಮಾಂಟೇರಿಯೋ, ರವಿ ಕಿಶನ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com