ಈ ಲಾಕ್‌ಡೌನ್ ಅವಧಿ ಸಾಕಾಗಲಿಲ್ಲ: ನಟಿ ಶ್ರೀಲೀಲಾ

ಲಾಕ್ ಡೌನ್ ನಡುವೆಯೇ ಕ್ಯಾಮರಾ ಲೈಟ್ಸ್ ಗಳನ್ನೆದುರಿಸಲು ನಟಿ ಶ್ರೀಲೀಲಾ ಸಿದ್ದವಾಗಿದ್ದು ಅವರೀಗ ಮೆಗಾ ಫೋಟೋಶೂಟ್‌ನ ಭಾಗವಾಗುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಈ ನಟಿಯ ಫೋಟೋಶುಟ್ ನಡೆಸಿದ್ದಾರೆ.
ಶ್ರೀಲೀಲಾ
ಶ್ರೀಲೀಲಾ
Updated on: 

ಲಾಕ್ ಡೌನ್ ನಡುವೆಯೇ ಕ್ಯಾಮರಾ ಲೈಟ್ಸ್ ಗಳನ್ನೆದುರಿಸಲು ನಟಿ ಶ್ರೀಲೀಲಾ ಸಿದ್ದವಾಗಿದ್ದು ಅವರೀಗ ಮೆಗಾ ಫೋಟೋಶೂಟ್‌ನ ಭಾಗವಾಗುತ್ತಿದ್ದಾರೆ. ಕೆಜಿಎಫ್ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಈ ನಟಿಯ ಫೋಟೋಶುಟ್ ನಡೆಸಿದ್ದಾರೆ.ಪನ್ನಾ ಪೂರ್ಣಿಮಾ ಅವರ ಶೈಲಿಯಲ್ಲಿ, ತಮ್ಮ ಹುಟ್ಟುಹಬ್ಬದ ನಿಮಿತ್ತ ಈ ಫೋಟೋಶೂಟ್ ಮಾಡಿದ ಶ್ರೀಲೀಲಾ, “ನನ್ನ ಮಟ್ಟಿಗೆ, ಈ ಫೋಟೋಶೂಟ್ ಫಿಲ್ಮ್ ಸೆಟ್‌ಗಳಲ್ಲಿರುವಂತೆಯೇ ಇತ್ತು ನಾನದನ್ನು ಬಹಳಷ್ಟು ಇಷ್ಟಪಟ್ಟಿದ್ದೆ, ಅಲ್ಲದೆ ಶೂಟಿಂಗ್ ಸೆಟ್ ನಲ್ಲಿರುವ ಬಹಳಷ್ಟು ಅವಕಾಶವನ್ನುನಾನೀಗ ಕಳೆದುಕೊಂಡಿದ್ದೇನೆ." ಎಂದರು. ಸಿನಿಮಾ ಮತ್ತು ಅವರ ಶಿಕ್ಷಣದ ನಡುವೆ ಸಮತೋಲನ ಸಾಧಿಸುತ್ತಿರುವ ನಟಿ , ಲಾಕ್‌ಡೌನ್ ತನಗೆ ಬಹಳಷ್ಟು ವಿಷಯಗಳನ್ನು ಕಲಿಸಿದೆ ಎಂದು ಭಾವಿಸುತ್ತಾರೆ.

"ಲಾಕ್‌ಡೌನ್ ಸಂಭವಿಸಿದಾಗ, ನನ್ನ ಹಳೆಯ ಅಭ್ಯಾಸಕ್ಕೆ ಮರಳಲು ನಾನು ಸಮಯ ತೆಗೆದುಕೊಂಡೆ. ಕಳೆದ ಎರಡು ವರ್ಷಗಳಲ್ಲಿ, ನಾನು ಶೂಟಿಂಗ್ ಮತ್ತು ಪ್ರಚಾರಗಳಲ್ಲಿ ನಿರತರಾಗಿದ್ದೇನೆ. ನಾನು ಈ ಕ್ವಾರಂಟೈನ್ ಸಮಯವನ್ನು ಉಪಯುಕ್ತ ರೀತಿಯಲ್ಲಿ ಕಳೆಯಬೇಕಾಯಿತು. ಬಹುಶಃ ಈ ಲಾಕ್‌ಡೌನ್ ತುಂಬಾ ಚಿಕ್ಕದಾಗಿದೆ ಎಂದು ಭಾವಿಸಿರುವ ವ್ಯಕ್ತಿ ಅದು ನಾನು ಮಾತ್ರ!

 “ನಾನು ಲಾಕ್‌ಡೌನ್ ಅವಧಿಯಲ್ಲಿ ಕನಿಷ್ಠ 20 ಸ್ಕ್ರಿಪ್ಟ್‌ಗಳು ಮತ್ತು ವೆಬ್ ಸೀರೀಸ್ ಯೋಜನೆಗಳ ಬಗ್ಗೆ ಚರ್ಚಿಸಿದ್ದೇನೆ.  ಆದರೆ ಒಂದು ಕುತೂಹಲಕಾರಿ ಅಂಶವೆಂದರೆ ಎಲ್ಲಾ ಕಥೆಗಳು ಅಪೂರ್ವವಾಗಿದ್ದವು. " ಕಿಸ್ ಚಿತ್ರದ ನಾಯಕಿ ಹೇಳಿದ್ದಾರೆ.

 “ಕಿಸ್ ತುಂಬಾ ಆಧುನಿಕವಾಗಿತ್ತು, ಮತ್ತು ನನ್ನ ಎರಡನೇ ಚಿತ್ರ ಭರಾಟೆ ಸಹ ಭಾರತೀಯ ಶೈಲಿಯ ಚಿತ್ರ. ಈಗ ಹಲವು ಆಯ್ಕೆಗಳೊಂದಿಗೆ, ನನ್ನ ಸ್ಕ್ರಿಪ್ಟ್ ಆಯ್ಕೆಗಳನ್ನು ಹೊಂದಲು ನಾನು ನೋಡುತ್ತಿದ್ದೇನೆ. ಅದೃಷ್ಟವಶಾತ್, ನಾನು ಆ ಲೈನ್ ಗಳಲ್ಲಿ ಕಥೆಗಳನ್ನು ಕೇಳುತ್ತಿದ್ದೇನೆ  ನಾನು ಪ್ರಾಮಾಣಿಕವಾಗಿ ಹೇಳುವುದಾದರೆ ದಿವಾ ಪಾತ್ರಧಾರಿಯಾಗಲು ನಾನು ಬಯಸಿದ್ದೆ. ಅದು ನನಗೆ ಸಾಕಷ್ಟುಪ್ರತಿಭೆಯನ್ನು ಹೊರಹಾಕಲು ಅವಕಾಶ ಕಲ್ಪಿಸುತ್ತದೆ. ಆ ಪಾತ್ರಗಳನ್ನು ಇಷ್ಟಪಡುತ್ತೇನೆ, ಅದು ನನಗೆ ಬಹಿರಂಗವಾಗಿ ಮಾತನಾಡಲು ಅನುವು ಮಾಡಿಕೊಡುತ್ತದೆ. ಅದು ನಾನು ಆನಂದಿಸುವ ವಿಷಯ. ನಟಿಯಾಗಿ ನಾನು ಕಮರ್ಷಿಯಲ್ ಹಾಗೂ ಎಕ್ಸ್ ಪರಿಮೆಂಟಲ್ ಚಿತ್ರಗಳಲ್ಲಿ ಸಹ ನಟಿಸಬೇಕಿದೆ. ಎರಡೂ ಮುಖ್ಯವಾದ ತಳಹದಿಯಾಗಿರಲಿದೆ. ನಾನು ಎರಡನ್ನೂ ಸಮನಾಗಿ ಕಾಣಲು ಬಯಸುತ್ತೇನೆ. 

"ನಾನು ಯೆಸ್ ಎನ್ನಲು ಕೆಲವು ಯೋಜನೆಗಳಿಗೆ ಸಿದ್ದವಿದ್ದೇನೆ ಟೀಂ ನವರು ಯೋಜನೆಯನ್ನು ಯಾವಾಗ ಪ್ರಾರಂಭಿಸಲು ಬಯಸುತ್ತಾರೆ ಎನ್ನುವುದು ದೃಢವಾಗಿಲ್ಲ. " ನಟಿ  ಇತರ ಭಾಷೆಗಳಿಂದ ಯೋಜನೆಗಳನ್ನು ಪಡೆಯುತ್ತಿದ್ದರೂ ಸಹ, ಅವರ ಗಮನವು ಪ್ರಸ್ತುತ ಕನ್ನಡದೊಂದಿಗೆ ಮಾತ್ರ ಹೆಚ್ಚು ಸಂಬಂಧ ಹೊಂದಲು ಬಯಸುತ್ತಾರೆ. ತನ್ನ ಚಲನಚಿತ್ರಗಳಿಗೆ ಸ್ಕ್ರಿಪ್ಟ್‌ಗಳನ್ನು ಆರಿಸುವುದುಎಲ್ಲರ ತೀರ್ಮಾನವಾಗಿರಲಿದೆ ಎನ್ನುವ ನಟಿ “ಯಾವುದೇ ಸ್ಕ್ರಿಪ್ಟ್‌ಗಳು, ಅದು ನನ್ನನ್ನು ತಲುಪುವ ಮೊದಲು, ಸಾಮಾನ್ಯವಾಗಿ ನನ್ನ ತಾಯಿಯಿಂದ ಪರಿಶೀಲಿಸಲ್ಪಡುತ್ತದೆ.ಇದು ನನ್ನ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಸುತ್ತದೆ ಎಂದಾದರೆ ನಾನು ಒಪ್ಪಿಕೊಳ್ಳುವೆ. ಏಕೆಂದರೆ ನಮ್ಮಿಬ್ಬರದೂ ಒಂದೇ ಮನಸ್ಥಿತಿಯಾಗಿದೆ. ಮತ್ತು ಕೆಟ್ಟದ್ದನ್ನು ಫಿಲ್ಟರ್ ಮಾಡಲು ಇದು ಸಹಾಯ ಮಾಡುತ್ತದೆ ”ಎಂದು ಶ್ರೀಲೀಲಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com