ಶಕೀಲಾ ಚಿತ್ರದ ಟೀಸರ್ ಬಿಡುಗಡೆ

90ರ ದಶಕದಲ್ಲಿ ಸ್ಟಾರ್ ನಟರನ್ನು ಬದಿಗಿರಿಸಿ ಮಾಲಿವುಡ್ ಚಿತ್ರರಂಗವನ್ನು ಆಳಿದ ನಟಿ ಶಕೀಲಾ ಅವರ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ಶಕೀಲ ಚಿತ್ರದ ಪೋಸ್ಟರ್
ಶಕೀಲ ಚಿತ್ರದ ಪೋಸ್ಟರ್
Updated on: 

ಕೊಚ್ಚಿನ್: 90ರ ದಶಕದಲ್ಲಿ ಸ್ಟಾರ್ ನಟರನ್ನು ಬದಿಗಿರಿಸಿ ಮಾಲಿವುಡ್ ಚಿತ್ರರಂಗವನ್ನು ಆಳಿದ ನಟಿ ಶಕೀಲಾ ಅವರ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

90ರ ದಶಕದಲ್ಲಿ ಮುದುಕರಿಂದ ಹಿಡಿದು ಯುವಕರವರೆಗೂ ನಿದ್ದೆಗೆಡಿಸಿದ್ದ ನೀಲಿ ಚಿತ್ರತಾರೆ ಶಕೀಲಾ ಅವರ ಜೀವನಾಧಾರಿತ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಟಿ ಸರಾಯು ಮೋಹನ್ ಅವರು ಶಕೀಲಾ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು, ಟೀಸರ್ ನಲ್ಲಿ ಶಕೀಲಾ ಸಿನಿಮಾದ 90ರ ಪ್ರಚಾರದ ಝಲಕ್​ ಅನ್ನು ತೋರಿಸಲಾಗಿದೆ.

ಸುಗೀಶ್ ನಿರ್ದೇಶಿಸಿರುವ ಈ ಸಿನಿಮಾ ಮೂಲಕ ಶಕೀಲಾ ಜೀವನದ ಪರದೆಯ ಹಿಂದಿನ ಅಸಲಿ ಕಹಾನಿಗಳು ಹೊರಬೀಳಲಿದೆ ಎಂಬ ಮಾತುಗಳು ಮಾಲಿವುಡ್​ನಲ್ಲಿದೆ. ಅಲ್ಲದೆ ಸಾಮಾನ್ಯ ಕುಟುಂಬದ ಹುಡುಗಿ ಹೇಗೆ ಅಶ್ಲೀಲ ಚಿತ್ರತಾರೆಯಾಗಿ ಸೌತ್ ಸಿನಿರಂಗವನ್ನು ಹೇಗೆ ಆಳಿದರು ಎಂಬುದು ಕೂಡ ಅನಾವರಣವಾಗಲಿದೆ. ಫನ್​ಡೆ ಕ್ಲಬ್ ಕತ್ತರ್ ನಿರ್ಮಿಸಿರುವ ಶಕೀಲಾ ಸಿನಿಮಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಈ ಹಿಂದೆ ಶಕೀಲಾ ಕುರಿತಾದ ಸಿನಿಮಾ ಮಾಡುವುದಾಗಿ ಕನ್ನಡ ನಿರ್ದೇಶಕ ಇಂದ್ರಜಿತ್ ಲಂಕೇಶ್ ಘೋಷಿಸಿದ್ದರು. ಚಿತ್ರದಲ್ಲಿನ ಬೋಲ್ಡ್ ಪಾತ್ರಕ್ಕಾಗಿ ಬಾಲಿವುಡ್ ನಟಿ ರಿಚಾ ಚಡ್ಡಾರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಆ ಬಳಿಕ ಸಿನಿಮಾ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com