ಹೋಂ ಕ್ವಾರಂಟೈನ್ ನಲ್ಲಿದ್ದ ದಕ್ಷಿಣ ಭಾರತ ಹಿರಿಯ ನಟಿ ವಾಣಿಶ್ರೀ ಪುತ್ರ ಆತ್ಮಹತ್ಯೆ!

ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಪುತ್ರ ಅಭಿನಯ್ ವೆಂಕಟೇಶ್ ಕಾರ್ತಿಕ್ (೩೬) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಿರಿಯ ನಟಿ ವಾಣಿಶ್ರೀ ಮತ್ತು ಅವರ ಮಗ ಅಭಿನಯ್  ವೆಂಕಟೇಶ್ ಕಾರ್ತಿಕ್
ಹಿರಿಯ ನಟಿ ವಾಣಿಶ್ರೀ ಮತ್ತು ಅವರ ಮಗ ಅಭಿನಯ್ ವೆಂಕಟೇಶ್ ಕಾರ್ತಿಕ್
Updated on: 

ಚೆನ್ನೈ: ದಕ್ಷಿಣ ಭಾರತದ ಹಿರಿಯ ನಟಿ ವಾಣಿಶ್ರೀ ಪುತ್ರ ಅಭಿನಯ್ ವೆಂಕಟೇಶ್ ಕಾರ್ತಿಕ್ (೩೬) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚೆಂಗಲ್ ಪಟ್ಟು ಜಿಲ್ಲೆಯ ತಿರಕ್ಕಳುಕುಂಡ್ರಾದಲ್ಲಿರುವ ತೋಟದ ಮನೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ  ಬೆಳಕಿಗೆ ಬಂದಿದೆ. 

ಬೆಂಗಳೂರಿನ ಸರ್ಕಾರಿ  ವೈದ್ಯಕೀಯ  ಆಸ್ಪತ್ರೆಯಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದ ಅಭಿನಯ್  ಬೆಂಗಳೂರಿನಿಂದ  ಬಂದ ನಂತರ ಹೋಂ ಕ್ವಾರಂಟೈನ್ ನಲ್ಲಿದ್ದರು. ಆದರೆ ಅವರು ಶುಕ್ರವಾರವೇ  ಆತ್ಮಹತ್ಯೆಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಅಭಿನಯ್ ಪತ್ನಿ ಸಹ ವೈದ್ಯರಾಗಿದ್ದು, ದಂಪತಿಗೆ ಒಬ್ಬ ಪುತ್ರ ಹಾಗೂ ಪುತ್ರಿ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com