ರೋಮ್ಯಾಂಟಿಕ್ ಥ್ರಿಲ್ಲರ್ 'ಮ್ಯಾಟ್ನಿ' ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ರಚಿತಾ ರಾಮ್

ಅಯೋಗ್ಯ ಚಿತ್ರದ ಜೋಡಿ ಮತ್ತೆ ಒಂದಾಗಿದೆ. ಮನೋಹರ್ ಕಾಂಪಳ್ಳಿ ಚೊಚ್ಚಲ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ 'ಮ್ಯಾಟ್ನಿ' ಚಿತ್ರದಲ್ಲೂ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ.
ಸತೀಶ್ ನೀನಾಸಂ, ರಚಿತಾ ರಾಮ್
ಸತೀಶ್ ನೀನಾಸಂ, ರಚಿತಾ ರಾಮ್
Updated on

ಬೆಂಗಳೂರು: ಅಯೋಗ್ಯ ಚಿತ್ರದ ಜೋಡಿ ಮತ್ತೆ ಒಂದಾಗಿದೆ. ಮನೋಹರ್ ಕಾಂಪಳ್ಳಿ ಚೊಚ್ಚಲ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ 'ಮ್ಯಾಟ್ನಿ' ಚಿತ್ರದಲ್ಲೂ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯಿಸುತ್ತಿದ್ದಾರೆ.

ಇಂದು ರಚಿತಾ ರಾಮ್ ಅವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಸತೀಶ್ ನೀನಾಸಂ ಹಾಗೂ ನಿರ್ಮಾಣ ಸಂಸ್ಥೆ ಈ ವಿಷಯವನ್ನು ಹಂಚಿಕೊಂಡಿದೆ. ಏಪ್ರಿಲ್, ಲಿಲ್ಲಿ, ವೀರಂ ಚಿತ್ರಗಳ ಜೊತೆಗೆ ಮ್ಯಾಟ್ನಿಯಲ್ಲೂ ರಚಿತಾ ರಾಮ್ ಮೋಡಿ ಮಾಡಲಿದ್ದಾರೆ.

ಮ್ಯಾಟ್ನಿ ಚಿತ್ರದ ಫಸ್ಟ್ ಲುಕ್ ನ್ನು ಸತೀಶ್ ನೀನಾಸಂ ಬಿಡುಗಡೆ ಮಾಡಿದ್ದಾರೆ. ಪಾರ್ವತಿ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದು, ಈ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ.

ವಿಜಯ ಪ್ರಸಾದ್ ಅವರ 'ಪೆಟ್ರೋ ಮ್ಯಾಕ್ಸ್' ಚಿತ್ರದ ಚಿತ್ರೀಕರಣ ಅಕ್ಟೋಬರ್ ಎರಡನೇ ವಾರದಿಂದ ಮೈಸೂರಿನಲ್ಲಿ ಆರಂಭವಾಗಲಿದ್ದು, ಅದರ ಜೊತೆಗೆ ಮ್ಯಾಟ್ನಿ ಚಿತ್ರದ ಚಿತ್ರೀಕರಣದಲ್ಲೂ ಸತೀಶ್ ನೀನಾಸಂ ಪಾಲ್ಗೊಳ್ಳಲಿದ್ದಾರೆ. ಮ್ಯಾಟ್ನಿ ಚಿತ್ರಕ್ಕೆ ಪೂರ್ಣ ಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಲಿದ್ದು, ಕ್ರಾಂತಿ ವರ್ಲಾ ಅವರ ಛಾಯಾಗ್ರಹಣವಿರಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com