ದಿ ಫಾಲನ್ ಸಿನಿಮಾದಲ್ಲಿ ಪ್ರಭು ಮುಂಡ್ಕೂರ್ ಫಸ್ಟ್ ಲುಕ್ ಹೀಗಿದೆ...

ಉರ್ವಿ, ಬ್ರಹ್ಮಿ ನಿರ್ದೇಶಕ ಬಿಎಸ್ ಪ್ರದೀಪ್ ವರ್ಮಾ ತಮ್ಮ ಮೊದಲ ಫೀಚರ್ ಸಿನಿಮಾ ದಿ ಫಾಲನ್ ಶೂಟಿಂಗ್ ನ್ನು ಪೂರ್ಣಗೊಳಿಸಿದ್ದು, ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುವುದಕ್ಕೆ ತಯಾರಾಗಿದೆ. ನಟ ಪ್ರಭು ಮುಂಡ್ಕೂರ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಭವಿಷ್ಯದ ಕಾಲಮಾನ (4100 ನೇ ವರ್ಷ)ವನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು, ಲಡಾಖ್ ಮತ್ತಿತರ ಪ್ರದೇಶಗಳನ್ನು ಚಿತ್ರೀಕರಿಸಲಾಗಿದೆ. ಸತ್ಯ ಬಿ.ಜಿ, ಅನುಪಮಾ ಗೌಡ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಪೋಸ್ಟ್ ಪ್ರೊಡಕ್ಷನ್ ಫೇಸ್ ನಲ್ಲಿದೆ. 

ಸಂಗೀತಕ್ಕಾಗಿ ಚಿತ್ರತಂಡ ಜಾರ್ಜಿಯನ್ ಸಂಯೋಜಕರ  ಜೊತೆಗೂಡುತ್ತಿದ್ದು ಈ ಕುರಿತ ಹೆಚ್ಚಿನ ವಿವರಣೆ ಶೀಘ್ರವೇ ತಿಳಿಯಲಿದೆ. 

ಧಾಕ್ಕಾ ಪ್ರೊಡಕ್ಷನ್ ಹಾಗೂ ಎಎಸ್ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ದಿ ಫಾಲನ್ ಚಿತ್ರ ಭವಾನಿ ಪ್ರಕಾಶ್, ಮಯೂರಿ ನಟರಾಜ, ರಾಘವ್ ಹಾಗೂ ನೃತ್ಯ ನಿರ್ದೇಶಕ-ನಟ ಸತ್ಯ ಬಿಜಿ ಅವರನ್ನೊಳಗೊಂಡ ತಾರಾಗಣ, ಆನಂದ್ ಸುಂದರೇಶ ಛಾಯಾಗ್ರಹಣವನ್ನು ಹೊಂದಿದೆ. 

ಬೃಹತ್ ಸಾಮೂಹಿಕ ಅಳಿವು ಹಾಗೂ ಉಳಿದ ಜೀವ ಸಂಕುಲದ ಬದುಕುಳಿಯುವಿಕೆ, ಅವಶೇಷಗಳ ಕಥಾಹಂದರವನ್ನು ಹೊಂದಿದೆ.  ಪ್ರದೀಪ್ ವರ್ಮಾ ಅವರ ಉರ್ವಿ ಮೂಲಕ ಪ್ರಭು ಮುಂಡ್ಕೂರ್ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com