ಬೆಂಗಳೂರು: ಅಘನ್ಯ ಪಿಕ್ಚರ್ಸ್ ಅವರ 'ಶಂಭೋ ಶಿವ ಶಂಕರ' ಚಿತ್ರದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
ಮೊದಲ ಸನ್ನಿವೇಶಕ್ಕೆ ಆರ್ ವಿ ಮಮತ ಆರಂಭ ಫಲಕ ತೋರಿದರೆ. ನಿರ್ಮಾಪಕ ವರ್ತೂರು ಮಂಜು ಕ್ಯಾಮೆರಾ ಚಾಲನೆ ಮಾಡಿದರು.
ಶೀರ್ಷಿಕೆ ಕೇಳಿದರೆ ಇದೊಂದು ಭಕ್ತಿ ಪ್ರಧಾನ ಚಿತ್ರ ಅನಿಸುತ್ತದೆ. ಆದರೆ ಇದು ಸಸ್ಪೆನ್ಸ್ ಚಿತ್ರ. ಶಂಭೋ ಶಿವ ಶಂಕರ ಎನ್ನುವುದು ಮೂರು ಪಾತ್ರಗಳ ಹೆಸರು.
ಶಂಭುವಿನ ಪಾತ್ರದಲ್ಲಿ ಅಭಯ್ ಪುನೀತ್, ಶಿವನ ಪಾತ್ರವನ್ನು ರಕ್ಷಕ್ ಹಾಗೂ ಶಂಕರನ ಪಾತ್ರ ರೋಹಿತ್ ನಿರ್ವಹಣೆ ಮಾಡುತ್ತಿದ್ದಾರೆ.
Advertisement