ನಟ, ನಿರ್ಮಾಪಕ ದ್ವಾರಕೀಶ್ ಪತ್ನಿ ಅಂಬುಜಾ ದ್ವಾರಕೀಶ್ ನಿಧನ

ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್‌ ಅವರ ಪತ್ನಿ ಅಂಬುಜಾ (80 ವರ್ಷ) ಅವರು ಇಂದು ವಿಧಿವಶರಾಗಿದ್ದಾರೆ.
ದ್ವಾರಕೀಶ್ ಪತ್ನಿ ಅಂಬುಜಾ
ದ್ವಾರಕೀಶ್ ಪತ್ನಿ ಅಂಬುಜಾ
Updated on

ಬೆಂಗಳೂರು: ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್‌ ಅವರ ಪತ್ನಿ ಅಂಬುಜಾ (80 ವರ್ಷ) ಅವರು ಇಂದು ವಿಧಿವಶರಾಗಿದ್ದಾರೆ.

ಎಚ್ ಎಸ್ ಆರ್ ಲೇ ಔಟ್ ನ ತಮ್ಮ ಸ್ವಗೃಹದಲ್ಲಿ ಅಂಬುಜಾ ಅವರು ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಮೃತ ಅಂಬುಜಾ ಅವರಿಗೆ 80 ವರ್ಷ ವಯಸ್ಸಾಗಿತ್ತು. ಮಕ್ಕಳಾದ ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಐದು ಮಂದಿ ಗಂಡು ಮಕ್ಕಳು ಮತ್ತು ಪತಿ ದ್ವಾರಕೀಶ್ ಅವರನ್ನು ಅವರು ಅಗಲಿದ್ದಾರೆ. ಇಂದು ಸಂಜೆ ಅವರ ಅಂತ್ಯ ಸಂಸ್ಕಾರ ನೆರವೇರಲಿರುವುದಾಗಿ ಯೋಗಿಯವರು ತಿಳಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅಂಬುಜಾ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಎಚ್ ಎಸ್ ಅರ್ ಲೇಔಟ್ ನ ಅಪಾರ್ಟ್ಮೆಂಟ್ ನಲ್ಲಿ ಸದ್ಯ ಅಂಬುಜ ಪಾರ್ಥೀವ ಶರೀರ ಇಡಲಾಗಿದೆ. ಶುಕ್ರವಾರ ಸಂಜೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com