ಎರಡು ಸಿನಿಮಾಗಳಿಗೆ 744 ಕೋಟಿ ರೂ. ಸಂಭಾವನೆ ಪಡೆದ ಜೇಮ್ಸ್ ಬಾಂಡ್ ನಟ

ಇದುವರೆಗೂ ಯಾವ ದೊಡ್ಡ ದೊಡ್ಡ ಹಾಲಿವುಡ್ ಸ್ಟುಡಿಯೋಗಳೂ ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಕೊಟ್ಟ ಉದಾಹರಣೆಯಿಲ್ಲ. ಇದೀಗ ಡೇನಿಯಲ್ ಕ್ರೇಗ್ ಸಂಭಾವನೆ ಹೆಚ್ಚಳಕ್ಕೆ ಒಟಿಟಿ (ಓವರ್ ದಿ ಟಾಪ್) ಮನರಂಜನಾ ತಾಣಕ್ಕೆ ಬೇಡಿಕೆ ಕುದುರಿರುವುದೇ ಕಾರಣ.
'ಸ್ಕೈ ಫಾಲ್' ಬಾಂಡ್ ಸಿನಿಮಾದ ದೃಶ್ಯದಲ್ಲಿ ಡೇನಿಯಲ್ ಕ್ರೇಗ್
'ಸ್ಕೈ ಫಾಲ್' ಬಾಂಡ್ ಸಿನಿಮಾದ ದೃಶ್ಯದಲ್ಲಿ ಡೇನಿಯಲ್ ಕ್ರೇಗ್
Updated on

ಹಾಲಿವುಡ್: ಜೇಮ್ಸ್ ಬಾಂಡ್ ನಟ ಡೇನಿಯಲ್ ಕ್ರೇಗ್ ಮುಂಬರಲಿರುವ ಎರಡು ಸಿನಿಮಾಗಳಿಗೆ 744 ಕೋಟಿ ರೂ. ಸಂಭಾವನೆ ಪಡೆದು ದಾಖಲೆ ನಿರ್ಮಿಸಿದ್ದಾರೆ. 2019ರಲ್ಲಿ ಬಿಡುಗಡೆಯಾಗಿದ್ದ ನೈವ್ಸ್ ಔಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗೆ ಪ್ರೇಕ್ಷಕರಿಂದ ಮಾತ್ರವಲ್ಲದೆ ವಿಮರ್ಶಕರಿಂದಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲಿ ಮುಖ್ಯವಾದ ಡಿಟೆಕ್ಟಿವ್ ಪಾತ್ರವನ್ನು ಡೇನಿಯಲ್ ಕ್ರೇಗ್ ನಿರ್ವಹಿಸಿದ್ದರು.

ವಿಭಿನ್ನ ಪ್ರಕಾರದ ಆ ಸಿನಿಮಾ ಜಗತ್ತಿನಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಇದೀಗದೇ ಸಿನಿಮಾದ ಎರಡು ಅವತರಣಿಕೆಗಳು ತೆರೆಗೆ ಬರಲು ಸಿದ್ಧವಾಗಿವೆ. ಅವೇ ಎರಡು ಸಿನಿಮಾಗಳ ನಟನೆಗಾಗಿ ಡೇನಿಯಲ್ ಕ್ರೇಗ್ 744 ಕೋಟಿ. ರೂ. ಸಂಭಾವನೆ ಪಡೆದಿರುವುದು. 

ಇದುವರೆಗೂ ಯಾವ ದೊಡ್ಡ ದೊಡ್ಡ ಹಾಲಿವುಡ್ ಸ್ಟುಡಿಯೋಗಳೂ ಇಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಕೊಟ್ಟ ಉದಾಹರಣೆಯಿಲ್ಲ. ಇದೀಗ ಡೇನಿಯಲ್ ಕ್ರೇಗ್ ಸಂಭಾವನೆ ಹೆಚ್ಚಳಕ್ಕೆ ಒಟಿಟಿ (ಓವರ್ ದಿ ಟಾಪ್) ಮನರಂಜನಾ ತಾಣಕ್ಕೆ ಬೇಡಿಕೆ ಕುದುರಿರುವುದೇ ಕಾರಣ. ಹಾಲಿವುಡ್ ಸಿನಿಮಾಗಳನ್ನು ಕೊರೊನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳಿಸದೇ ನೇರವಾಗಿ ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ನಂಥ ಒಟಿಟಿ ಮನರಂಜನಾ ಜಾಲತಾಣತಾಣಗಳಲ್ಲಿ ಬಿಡುಗಡೆ ಮಾಡುವ ಬೆಳವಣಿಗೆ ಕಂಡು ಬರುತ್ತಿದೆ. 

ಇದರಿಂದಾಗಿ ಅನೇಕ ಹಾಲಿವುಡ್ ಸ್ಟಾರ್ ಗಳ ಸಂಭಾವನೆ ಹೆಚ್ಚಳವಾಗಿದೆ. ಟೈಟಾನಿಕ್ ಖ್ಯಾತಿಯ ನಟ ಲಿಯೊನಾರ್ಡೊ ಡಿಕ್ಯಾಪ್ರಿಯೊ ಮುಂದಿನ ಸಿನಿಮಾಗಾಗಿ 223 ಕೋಟಿ ರೂ. ಪಡೆದರೆ, ನಟಿಯರಾದ ಜೆನಿಫರ್ ಲಾರೆನ್ಸ್ ಮತ್ತು ಜೂಲಿಯಾ ರಾಬರ್ಟ್ಸ್ 185 ಕೋಟಿ ರೂ. ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com