ಅಧಮ, ನಾಯಿ ಪದ ಬಳಕೆ ಮಾಡಿದ್ದ ಜಗ್ಗೇಶ್ ವಿರುದ್ಧ ದೂರು ದಾಖಲು

ಸ್ವೆಟರ್ ಹಗರಣಕ್ಕೆ ಸಂಬಂಧಿಸಿದಂತೆ ನವರಸ ನಾಯಕ ಜಗ್ಗೇಶ್ ಹಾಗೂ ಸಹೋದರ ಕೋಮಲ್ ವಿರುದ್ಧ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್.ರಘು ಆರೋಪಿಸಿದ್ದರು.
ಜಗ್ಗೇಶ್
ಜಗ್ಗೇಶ್
Updated on

ಬೆಂಗಳೂರು: ಸ್ವೆಟರ್ ಹಗರಣಕ್ಕೆ ಸಂಬಂಧಿಸಿದಂತೆ ನವರಸ ನಾಯಕ ಜಗ್ಗೇಶ್ ಹಾಗೂ ಸಹೋದರ ಕೋಮಲ್ ವಿರುದ್ಧ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್.ರಘು ಆರೋಪಿಸಿದ್ದರು.

ಸಿ.ಎಸ್.ರಘು ಮಾಡಿದ ಆರೋಪದ ಕುರಿತಾಗಿ ಜಗ್ಗೇಶ್ ಪ್ರತಿಕ್ರಿಯೆ ನೀಡಿದ್ದು, ಸಿ.ಎಸ್.ರಘು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದರು.

ಸ್ವೆಟರ್ ಹಗರಣದಲ್ಲಿ ಕೇಳಿಬಂದ ಆರೋಪ ಹಾಗೂ ಸಿ.ಎಸ್.ರಘು ವಿರುದ್ಧ ನಟ ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದರು. ಟ್ವೀಟ್‌ವೊಂದರಲ್ಲಿ ಅಧಮ, ನಾಯಿ ಎಂದು ಜಗ್ಗೇಶ್ ಉಲ್ಲೇಖಿಸಿದ್ದರು. ಹೀಗಾಗಿ ತಮ್ಮನ್ನು ನಟ ಜಗ್ಗೇಶ್ ''ಅಧಮ, ನಾಯಿ ಎಂದು ನಿಂದಿಸಿದ್ದಾರೆ'' ಎಂದು ಆಕ್ಷೇಪ ವ್ಯಕ್ತಪಡಿಸಿ ಸಿ.ಎಸ್.ರಘು ದೂರು ಕೊಟ್ಟಿದ್ದಾರೆ. 

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ಡಾ.ರವೀಂದ್ರನಾಥ್‌ಗೆ ಸಿ.ಎಸ್.ರಘು ದೂರು ಸಲ್ಲಿಸಿದ್ದಾರೆ. ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯರ್ಥ ತೋರಿಕೆ ಏಕೆಬೇಕು. ಆನೆ ರಾಜಮಾರ್ಗದಲ್ಲಿ ಆಗಲಿ, ಗಲ್ಲಿಯಲ್ಲಾಗಲಿ ನಡೆಯುವಾಗ ನಾಯಿ ಬೊಗಳುವುದು ಸಹಜ.

ನಮ್ಮ ಗುಣ ಆನೆಯಂತೆ ಇದ್ದಾಗ ಬೊಗಳುವ ನಾಯಿಗಳ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ನಮ್ಮ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ!'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಿ.ಎಸ್.ರಘು ದೂರು ಕೊಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com