ಸದ್ದು ಮಾಡುತ್ತಿದೆ ಶಿವರಾಜ್ ಕೆ.ಆರ್.ಪೇಟೆ ಧಮಾಕ ಸಿನಿಮಾದ 'ತುಕಾಲಿ' ಹಾಡು: ನವೀನ್ ಸಜ್ಜು ಕಂಠಸಿರಿಯಲ್ಲಿ ಹೊಸ ಫಿಲಾಸಫಿ 

ಧಮಾಕಾಗೆ ಆಕ್ಷನ್ ಕಟ್ ಹೇಳಿರುವ ಲಕ್ಷ್ಮೀ ರಮೇಶ್ ಅವರು ಈ ಹಾಡನ್ನು ರಚಿಸಿದ್ದು, ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದಾರೆ. 
ಧಮಾಕ ಸಿನಿಮಾ ಸ್ಟಿಲ್
ಧಮಾಕ ಸಿನಿಮಾ ಸ್ಟಿಲ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ಹಾಸ್ಯನಟರಾಗಿ ಬೇರೂರುತ್ತಿರುವ ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕರಾಗಿ ನಟಿಸುತ್ತಿರುವ ಧಮಾಕಾ ಸಿನಿಮಾದ 'ತುಕಾಲಿ' ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. 

'ತುಕಾಲಿ ಜೀವನ' ಎನ್ನುವ ಹೆಸರಿನ ಕಚಗುಳಿ ಇಡುವ ಈ ಹಾಡು ಆನಂದ್ ಆಡಿಯೊ ಯೂಟ್ಯೂಬ್ ನಲ್ಲಿ ರಿಲೀಸ್ ಆಗಿದ್ದು, ಭಾರೀ ಸದ್ದು ಮಾಡುತ್ತಿದೆ. ನಿರ್ದೇಶಕ ಲಕ್ಷ್ಮೀ ರಮೇಶ್ ಅವರು ಈ ಹಾಡನ್ನು ರಚಿಸಿದ್ದು, ಗಾಯಕ‌ ನವೀನ್ ಸಜ್ಜು ದನಿಯಾಗಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದಾರೆ. 

ಈ ಹಿಂದೆ ಸಿಂಪಲ್ ಸುನಿ ಬಳಗದಲ್ಲಿ ಗುರುತಿಸಿಕೊಂಡಿರುವ ಪ್ರತಿಭಾನ್ವಿತ ನಿರ್ದೇಶಕ ಲಕ್ಷ್ಮೀ ರಮೇಶ್ ಧಮಾಕಾಗೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನ ಹೊಣೆ ಹೊತ್ತಿದ್ದಾರೆ.  

ಕಾಮಿಡಿ ಕಿಲಾಡಿ ಶೋ ಮೂಲಕವೇ ಗುರುತಿಸಿಕೊಂಡಿರುವ ನಯನಾ ಶರತ್ 'ಧಮಾಕ' ಸಿನಿಮಾದಲ್ಲಿ ಶಿವರಾಜ್ ಕೆ.ಆರ್ ಪೇಟೆ ಜೊತೆ ನಟಿಸ್ತಿದ್ದಾರೆ. ಉಳಿದಂತೆ ಸಿದ್ದು ಮೂಲಿಮನಿ, ಪ್ರಿಯಾ ಆಚಾರ್, ಪ್ರಕಾಶ್‌ ತುಂಬಿನಾಡ್, ಮೋಹನ್ ಜುನೇಜಾ, ಕೋಟೆ ಪ್ರಭಾಕರ್, ಮೈಕೋ ನಾಗರಾಜ್, ಅರುಣಾ ಬಾಲರಾಜ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. 

ಎಸ್‌ಆರ್ ಮೀಡಿಯಾ ಪ್ರೊಡಕ್ಷನ್ಸ್‌ ಮತ್ತು ನಂದಿ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದೆ. ಹಾಲೇಶ್ ಸಿನಿಮೆಟೊಗ್ರಫಿ, ವಿನಯ್ ಕೂರ್ಗ್ ಸಂಕಲನ ಧಮಾಕಾ ಸಿನಿಮಾದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com