ಇಕ್ಕಟ್ ನಾಗಭೂಷಣ್, ಪ್ರಿಯಾಂಕಾ ತಿಮ್ಮೇಶ್ ಜೋಡಿಗೆ ಪ್ರೀತಂ ತಗ್ಗಿನಮನೆ ಚೊಚ್ಚಲ ನಿರ್ದೇಶನ
ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿ ಪ್ರಿಯಾಂಕಾ ತಿಮ್ಮೇಶ್ ಮತ್ತು ಇಕ್ಕಟ್ ಖ್ಯಾತಿಯ ನಾಗಭೂಷಣ್ ಜೋಡಿಯಾಗಿ ನಟಿಸುತ್ತಿರುವ ನೂತನ ಸಿನಿಮಾ ಚಿತ್ರೀಕರಣ ಪ್ರಾರಂಭಗೊಂಡಿದೆ.
ಇದನ್ನೂ ಓದಿ: 'ಇಕ್ಕಟ್' ಒಂದು ವಿಶಿಷ್ಟ ಲಾಕ್ಡೌನ್ ಸಿನೆಮಾ
ಈ ಸಿನಿಮಾ ಮೂಲಕ ಪ್ರೀತಂ ತಗ್ಗಿನಮನೆ ಮೊದಲ ಬಾರಿಗೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದಾರೆ. ಈ ಹಿಂದೆ ಪ್ರೀತಂ ಅವರು ಅಯೋಗ್ಯ ಮತ್ತು ರತ್ನಮಂಜರಿ ಸಿನಿಮಾಗಳಿಗೆ ಸಿನಿಮೆಟೋಗ್ರಾಫರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಲಮಕ್, ಅಯೋಗ್ಯ, ಬೀರ್ ಬಲ್ ಚಿತ್ರಗಳನ್ನು ನಿರ್ಮಿಸಿದ ಕ್ರಿಸ್ಟಲ್ ಪಾರ್ಕ್ ಸಿನಿಮಾಸ್, ಟಿ.ಆರ್ ಚಂದ್ರಶೇಖರ್ ಮತ್ತು ನಂದ ಕಿಶೋರ್ ಜೊತೆ ಸೇರಿ ನೂತನ ಸಿನಿಮಾ ನಿರ್ಮಾಣದಲ್ಲಿ ತೊಡಗಿದ್ದಾರೆ.
ನಾಗಭೂಷಣ್ ಅವರು ಲಾಕ್ ಡೌನ್ ಕುರಿತಾದ ಇಕ್ಕಟ್ ಸಿನಿಮಾದಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು. ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಎರಡು ಸಿನಿಮಾಗಳು ಅರ್ಜುನ್ ಗೌಡ ಮತ್ತು ಶುಗರ್ ಲೆಸ್ ಬಿಡುಗಡೆಗೆ ಸಿದ್ಧವಾಗಿವೆ.
Related Article
'ಪುಷ್ಪ' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಫಸ್ಟ್ ಲುಕ್ ಬಿಡುಗಡೆ, ಭಿನ್ನ ಗೆಟಪ್ ನಲ್ಲಿ ಮಿಂಚಿದ ಕಿರಿಕ್ ಪಾರ್ಟಿ ಬೆಡಗಿ
ಪಿ. ಶೇಷಾದ್ರಿ ನಿರ್ದೇಶನದ 'ಮೋಹನದಾಸ' ಚಿತ್ರ ಅಕ್ಟೋಬರ್ 1ರಂದು ತೆರೆಗೆ
ರಿಕಿ ಕೇಜ್ ಮತ್ತು ಆಫ್ಘನ್ ಸಂಗೀತಗಾರರ ಸಂಗಮ; ಆಫ್ಘನ್ ನೆಲದ ಕತೆ ಹೇಳುವ ಹೊಸ ಮ್ಯೂಸಿಕ್ ವಿಡಿಯೊ
ಪ್ರೀಮಿಯರ್ ಪದ್ಮಿನಿ ಭಾಗ 2 ಪ್ರೇಕ್ಷಕರಿಗೆ ಜಾಲಿ ರೈಡ್ ಅನುಭವ ನೀಡಲಿದೆ: ಜಗ್ಗೇಶ್
ಡಾರ್ಲಿಂಗ್ ಕೃಷ್ಣ ಮುಂದಿನ ಸಿನಿಮಾ ಟೈಟಲ್ ಫಿಕ್ಸ್: 'ದಿಲ್ ಪಸಂದ್' ಲಾಂಚ್ ಮಾಡಿದ ರವಿ ಚನ್ನಣ್ಣನವರ್!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ