ಡ್ರಗ್ಸ್ ಕೇಸ್: ಕಿಶೋರ್ ಆರೋಪ ಸುಳ್ಳು, ನಾನು ಎಲ್ಲಿಯೂ ಹಾರಿಹೋಗಿಲ್ಲ- ನಟಿ ಅನುಶ್ರೀ

ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತ್ರಿಕಿಯಿಸಿರುವ ನಟಿ ಅನುಶ್ರೀ, ತನ್ನ ವಿರುದ್ದ ಕಿಶೋರ್ ಅಮಾನ್ ಶೆಟ್ಟಿ ಮಾಡಿರುವ ಆರೋಪಗಳು ಸುಳ್ಳು ಎಂದಿದ್ದಾರೆ. 
ನಟಿ ಅನುಶ್ರೀ
ನಟಿ ಅನುಶ್ರೀ

ಬೆಂಗಳೂರು: ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತ್ರಿಕಿಯಿಸಿರುವ ನಟಿ ಅನುಶ್ರೀ, ತನ್ನ ವಿರುದ್ದ ಕಿಶೋರ್ ಅಮಾನ್ ಶೆಟ್ಟಿ ಮಾಡಿರುವ ಆರೋಪಗಳು ಸುಳ್ಳು ಎಂದಿದ್ದಾರೆ. 

ಸಿಸಿಬಿ ಕಳೆದ ಬಾರಿ ವಿಚಾರಣೆಗೆ ಕರೆದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗಳಿಲ್ಲ ಉತ್ತರ ಕೊಟ್ಟಿದ್ದೇನೆ. ಡ್ರಗ್ ಸೇವನೆ, ಖರೀದಿ ಬಗ್ಗೆ ಸಿಸಿಬಿ ನನ್ನ ವಿಚಾರಣೆ ನಡೆಸಿಲ್ಲ, ಕಿಶೋರ್ ಶೆಟ್ಟಿ ಪರಿಚಯವಿದ್ದ ಕಾರಣಕ್ಕೆ ನೋಟಿಸ್ ನೀಡಲಾಗಿತ್ತು. ಆ ಸಂಬಂಧ ಕಾನೂನಿನ ಪ್ರಕಾರ ಉತ್ತರ ನೀಡಿದ್ದೇನೆ. ಮತ್ತೆ ವಿಚಾರಣೆಗೆ ಕರೆದರೆ ಹಾಜರಾಗುವುದಾಗಿ ತಿಳಿಸಿದರು.

ಭಯದಿಂದ ಎಲ್ಲಿಯೂ ಹಾರಿಹೋಗಿರಲಿಲ್ಲ, ಕೆಲಸದ ನಿಮಿತ್ತ ಮುಂಬೈಗೆ ಹೋಗಿದ್ದೆ ಎಂದು ಹೇಳಿದ ಅನುಶ್ರೀ, ಮೊಬೈಲ್ ನಲ್ಲಿ ಟಿಕೆಟ್ ಬುಕ್ಕಿಂಗ್ ವಿವರವನ್ನು ಮಾಧ್ಯಮದವರ ಮುಂದೆ ತೋರಿಸಿದರು. ಯಾವ ಪ್ರಭಾವಶಾಲಿಗಳಿಗೂ ನಾನು ಕರೆ ಮಾಡಿಲ್ಲ. ಯಾರ ಸಹಾಯವನ್ನೂ ತೆಗೆದುಕೊಂಡಿಲ್ಲ ಎಂದು ಹೇಳಿದರು.

ಆಸ್ತಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅನುಶ್ರೀ, ಓರಾಯನ್ ಮಾಲ್ ಎದುರಿಗೆ ಇರುವ ಮನೆ ಬಾಡಿಗೆ ಮನೆ, ಈ ಕುರಿತು ಮನೆ ಮಾಲೀಕರನ್ನೇ ಕೇಳಬಹುದು, ಮಂಗಳೂರಿನ ಕದ್ರಿಯಲ್ಲಿರುವ ಮನೆಗೆ ಸಾಲ ಇನ್ನೂ ಬಾಕಿಯಿದೆ ಎಂದು ಮಾಹಿತಿ ನೀಡಿದರು.

ಯಾವ ಪಬ್, ಬಾರ್, ಪಾರ್ಟಿಗಳಿಗೆ ಹೋಗಿಲ್ಲ, ತಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಲಾಗುತ್ತಿದೆ. ಈ ಎಲ್ಲ ಘಟನೆಗಳಿಂದ ಮತ್ತಷ್ಟು ಗಟ್ಟಿಯಾಗಿರುವುದಾಗಿ ಅನುಶ್ರೀ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com