ಪಪ್ಪಿ ಲವ್ ಮೂಲಕ ಬಾಲಿವುಡ್ ಗೆ ಸ್ಯಾಂಡಲ್ ವುಡ್ ನಿರ್ದೇಶಕ ಹರಿ ಸಂತೋಷ್ ಪ್ರವೇಶ

ಅಲೆಮಾರಿ, ಕಾಲೇಜ್ ಕುಮಾರ್ ನಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ಸ್ಯಾಂಡಲ್ ವುಡ್ ನಿರ್ದೇಶಕ ಹರಿ ಸಂತೋಷ್ ಈಗ ಪಪ್ಪಿ ಲವ್ ಎಂಬ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.
ಹರಿ ಸಂತೋಷ್
ಹರಿ ಸಂತೋಷ್
Updated on: 

ಅಲೆಮಾರಿ, ಕಾಲೇಜ್ ಕುಮಾರ್ ನಂತಹ ಹಿಟ್ ಸಿನಿಮಾಗಳನ್ನು ನೀಡಿದ್ದ ಸ್ಯಾಂಡಲ್ ವುಡ್ ನಿರ್ದೇಶಕ ಹರಿ ಸಂತೋಷ್ ಈಗ ಪಪ್ಪಿ ಲವ್ ಎಂಬ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ.
 
ತನುಜಾ ವಿರ್ವಾನಿ, ತ್ರಿಧಾ ಚೌಧರಿ, ಸಪ್ನಾ ಪಬ್ಬಿ ತಾರಾಗಣದಲ್ಲಿ ಮೂಡಿ ಬರುತ್ತಿರುವ ಹೃದಯಸ್ಪರ್ಶಿ ಪ್ರೇಮ ಕಥೆ ಇದಾಗಿದ್ದು, ಬಾಲಿವುಡ್ ನ ಬಾಗಿಲು ತೆರೆದಿರುವುದಕ್ಕೆ ಎಸ್ಎಸ್ ರಾಜಮೌಳಿ, ಪ್ರಶಾಂತ್ ನೀಲ್ ರಂತಹ ನಿರ್ದೇಶಕರುಗಳಿಗೆ ಕೀರ್ತಿ ಸಲ್ಲಬೇಕು. ಬಾಲಿವುಡ್ ನಲ್ಲಿ ನಿರ್ದೇಶನ ಮಾಡಬೇಕೆಂಬುದು ದೀರ್ಘಾವಧಿಯ ಕನಸಾಗಿತ್ತು. ದಕ್ಷಿಣ ಭಾರತದ ಸಿನಿಮಾಗಳ ಕಥೆಗಳನ್ನು ರೀಮೇಕ್ ಮಾಡುವುದಕ್ಕೆ ಬಾಲಿವುಡ್ ನಲ್ಲಿ ಉತ್ಸುಕರಾಗಿದ್ದರೇ ಹೊರತು ಹೊಸ ಚಿತ್ರಕಥೆಯನ್ನು ಹೊಂದಿದ್ದ ನಿರ್ದೇಶಕರನ್ನು ಉತ್ತೇಜಿಸಲು ಸಿದ್ಧವಿರಲಿಲ್ಲ. 

ಭಾರತದ ಉತ್ತರ ಭಾಗದ ಮಾರುಕಟ್ಟೆಯಲ್ಲಿ ಆರ್ ಆರ್ ಆರ್ ಹಾಗೂ ಕೆಜಿಎಫ್ ನಂತಹ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ ಸಿನಿಮಾಗಳನ್ನು ನೋಡುವ ದೃಷ್ಟಿಯೇ ಬದಲಾಗಿದೆ ಎನ್ನುತ್ತಾರೆ ಸಂತೋಷ್. 

ಕನ್ನಡ ಚಿತ್ರರಂಗದಲ್ಲಿ ಮನ ಕಲಕುವ ಪ್ರೇಮ ಕಥೆಗಳನ್ನು ಸಿನಿಮಾ ಮಾಡುವುದಕ್ಕೇ ಸಂತೋಷ್ ಪ್ರಖ್ಯಾತಿ ಹೊಂದಿದ್ದಾರೆ. ಕನಸಿನ ಹುಡುಗಿ ಖ್ಯಾತಿಯ ನಿಕೇತ್ ಪಾಂಡೆ ಪಪ್ಪಿ ಲವ್ ಸಿನಿಮಾಗೆ ಕಥೆ ಬರೆದಿದ್ದು, ಭುವನ್ ಮೂವೀಸ್ ನ ನಿರ್ಮಾಪಕ ಸುರೇಶ್, ಅವಿನಾಶ್ ಡೇನಿಯಲ್ ಚಾರ್ಲ್ಸ್ (ಪದ್ಮಾವತಿ ಪಿಕ್ಚರ್ಸ್) ಹಾಗೂ ವಿಫುಲ್ ಶರ್ಮಾ (ಬ್ಲೂ ಬ್ಲಿಂಗ್ ಪ್ರೊಡಕ್ಷನ್ಸ್) ನಿರ್ಮಾಣವಿದೆ.

ಜುಲೈ ಮಧ್ಯಭಾಗದಲ್ಲಿ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಲಿದೆ. ರಾಜಾರಾಮ್ ಛಾಯಾಗ್ರಹಣವಿದ್ದು, ಬ್ರಿಟನ್ ನ ಹಲವು ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com