ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆ: ಯೋಧನ ಪಾತ್ರದಲ್ಲಿ ದುಲ್ಕರ್ ಸಲ್ಮಾನ್!

ನಟ ದುಲ್ಕರ್ ಸಲ್ಮಾನ್, ಮೃನಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಅಭಿನಯದ ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಯೋಧನ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರದ ಪೋಸ್ಟರ್
ಚಿತ್ರದ ಪೋಸ್ಟರ್

ನಟ ದುಲ್ಕರ್ ಸಲ್ಮಾನ್, ಮೃನಾಲ್ ಠಾಕೂರ್, ರಶ್ಮಿಕಾ ಮಂದಣ್ಣ ಅಭಿನಯದ ಸೀತಾ ರಾಮಂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ಯೋಧನ ಪಾತ್ರದಲ್ಲಿ ನಟಿಸಿದ್ದಾರೆ.

ಟಾಲಿವುಡ್ ಪ್ರೊಡಕ್ಷನ್ ಹೌಸ್ ವೈಜಯಂತಿ ಮೂವೀಸ್‌ನ ಬಹು ನಿರೀಕ್ಷಿತ ರೋಮ್ಯಾಂಟಿಕ್ ಸಾಹಸ 'ಸೀತಾ ರಾಮಂ' ಚಿತ್ರವನ್ನು ಹನು ರಾಘವಪುಡಿ ನಿರ್ದೇಶಿಸಿದ್ದಾರೆ. ಅಶ್ವಿನಿ ದತ್ ಮತ್ತು ಪ್ರಿಯಾಂಕಾ ದತ್ ಸ್ವಪ್ನಾ ಸಿನಿಮಾ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.

ಇದೀಗ ಹೊರಬಂದಿರುವ ಚಿತ್ರದ ಟೀಸರ್ ನಲ್ಲಿ ಕಾಶ್ಮೀರ ಕಣಿವೆಯಲ್ಲಿ ಒಂಟಿ ಸೈನಿಕನಾಗಿ ಗಸ್ತು ತಿರುಗುತ್ತಿರುವ ಅನಾಥ ಲೆಫ್ಟಿನೆಂಟ್ ರಾಮ್‌ನ ಪ್ರಪಂಚಕ್ಕೆ ಕರೆದೊಯ್ಯುತ್ತದೆ. ರಾಮನಿಗೆ ಪತ್ರ ಬರೆಯಲು ಯಾರೂ ಇಲ್ಲದಿದ್ದಾಗ ಒಂದು ದಿನ, ಅವನ ಹೆಂಡತಿ ಎಂದು ಹೇಳಿಕೊಳ್ಳುವ ಸೀತಾ ಮಹಾಲಕ್ಷ್ಮಿಯಿಂದ ಅವನಿಗೆ ಪತ್ರ ಬರುತ್ತದೆ. ಮುಂದೆ ಏನಾಗುತ್ತದೆ ಎಂಬ ನಿರೀಕ್ಷೆ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com