ನಟ ಧ್ರುವ ಸರ್ಜಾಗೆ ಹೆಣ್ಣು ಮಗು ಜನನ

ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾಗೆ ಹೆಣ್ಣು ಮಗು ಜನನವಾಗಿದೆ. ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರಣ, ಗಾಂಧಿ ಜಯಂತಿ ದಿನ ನವರಾತ್ರಿ ಸಂಭ್ರಮ ಮಧ್ಯೆ ಅವರ ಮನೆಗೆ ಮಹಾಲಕ್ಷ್ಮೀ ಕಾಲಿಟ್ಟಿದ್ದಾಳೆ. 
ಧ್ರುವ ಸರ್ಜಾ-ಪ್ರೇರಣಾ
ಧ್ರುವ ಸರ್ಜಾ-ಪ್ರೇರಣಾ
Updated on: 

ಬೆಂಗಳೂರು: ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾಗೆ ಹೆಣ್ಣು ಮಗು ಜನನವಾಗಿದೆ. ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕಾರಣ, ಗಾಂಧಿ ಜಯಂತಿ ದಿನ ನವರಾತ್ರಿ ಸಂಭ್ರಮ ಮಧ್ಯೆ ಅವರ ಮನೆಗೆ ಮಹಾಲಕ್ಷ್ಮೀ ಕಾಲಿಟ್ಟಿದ್ದಾಳೆ. 

ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಶಂಕರ್ ಇಂದು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ಸುದ್ದಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. 'ಪ್ರೇರಣಾಗೆ ನಾರ್ಮಲ್ ಡೆಲಿವರಿ ಆಗಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಇದೇ ಅಕ್ಟೋಬರ್ 6ರಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಜನ್ಮದಿನವಿದ್ದು ತಂದೆಗೆ ಪುತ್ರಿಯ ಆಗಮನ ಬೆಸ್ಟ್ ಗಿಫ್ಟ್ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com