ಸುನೀಲ್ ಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ 'ಗಜರಾಮ'ದಲ್ಲಿ ರಾಜವರ್ಧನ್ ನಟನೆ!

ಪ್ರಣಯಂ ಮತ್ತು ಹಿರಣ್ಣಯ್ಯ ಚಿತ್ರದ ಶೂಟಿಂಗ್ ಮುಗಿಸಿರುವ ಬಿಚ್ಚುಗತ್ತಿ ನಾಯಕ ರಾಜವರ್ಧನ್ ತಮ್ಮ ನಾಲ್ಕನೇ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ.
ರಾಜವರ್ಧನ್
ರಾಜವರ್ಧನ್
Updated on: 

ಪ್ರಣಯಂ ಮತ್ತು ಹಿರಣ್ಣಯ್ಯ ಚಿತ್ರದ ಶೂಟಿಂಗ್ ಮುಗಿಸಿರುವ ಬಿಚ್ಚುಗತ್ತಿ ನಾಯಕ ರಾಜವರ್ಧನ್ ತಮ್ಮ ನಾಲ್ಕನೇ ಪ್ರಾಜೆಕ್ಟ್ ಗೆ ಸಹಿ ಹಾಕಿದ್ದಾರೆ.

ಗಜರಾಮ ಎಂಬ ಶೀರ್ಷಿಕೆಯ ಈ ಚಿತ್ರವು ಆಕ್ಷನ್ ಎಂಟರ್‌ಟೈನರ್ ಆಗಿದ್ದು, ಯೋಗರಾಜ್ ಭಟ್ ಮತ್ತು ಸೂರಿ ಅವರ ಹಿಂದಿನ ಸಹಾಯಕ ಸುನಿಲ್ ಕುಮಾರ್ ವಿಎ ಈ ಚಿತ್ರದ ಮೂಲಕ ಚೊಚ್ಚಲ ನಿರ್ದೇಶಕರಾಗುತ್ತಿದ್ದಾರೆ. ಬಾಂಡ್ ರವಿ ಚಿತ್ರದ ನಿರ್ಮಾಪಕ ನರಸಿಂಹ ಮೂರ್ತಿ ಗಜರಾಮನಿಗೆ ಬಂಡವಾಳ ಹೂಡಲಿದ್ದು, ನಾಯಕನ ಫಸ್ಟ್ ಲುಕ್ ಅನಾವರಣ ಮಾಡುವ ಮೂಲಕ ಚಿತ್ರತಂಡ ಅಧಿಕೃತವಾಗಿ ಪ್ರಾಜೆಕ್ಟ್ ಆರಂಭಿಸಿದೆ.

ಶಿಷ್ಯ ದೀಪಕ್, ಶರತ್ ಲೋಹಿತಾಶ್ವ ಮತ್ತು ಶೋಭ್ ರಾಜ್ ಹೊರತುಪಡಿಸಿ ಉಳಿದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರತಂಡ ತೊಡಗಿದೆ. ಸೆಪ್ಟೆಂಬರ್ 29ರಂದು ಗಜರಾಮ ಮುಹೂರ್ತದೊಂದಿಗೆ ಚಿತ್ರೀಕರಣ ಪ್ರಾರಂಭವಾಗಲಿದೆ. ಮೊದಲ ಶೆಡ್ಯೂಲ್ ಬೆಂಗಳೂರಿನಲ್ಲಿ ನಡೆಯಲಿದೆ. ಕೆ ಎಸ್ ಚಂದ್ರಶೇಖರ್ ಛಾಯಾಗ್ರಹಣ ಮಾಡುತ್ತಿದ್ದರೆ, ಮುಂಗಾರು ಮಳೆ ಖ್ಯಾತಿಯ ಮನೋಮೂರ್ತಿ ಗಜರಾಮ ಚಿತ್ರಕ್ಕೆ ಸಂಗೀತ ಸಂಯೋಜಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com