ಸೈಕಲಾಜಿಕಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ 'ಲಂಕೆ' ನಿರ್ದೇಶಕ ರಾಮ್ ಪ್ರಸಾದ್!

ಲೂಸ್ ಮಾದ ಯೋಗಿ, ಕೃಷಿ ತಾಪಂಡ ಮತ್ತು ಸುಚೇಂದ್ರ ಪ್ರಸಾದ್ ನಟಿಸಿದ್ದ ಲಂಕೆ ಸಿನಿಮಾಗೆ ನಿರ್ದೇಶಕ ರಾಮ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದರು, ಸಿನಿಮಾ ಯಶಸ್ಸು ಕೂಡ ಕಂಡಿತ್ತು.
ಲಂಕೆ ಸಿನಿಮಾ ನಿರ್ದೇಶಕ ರಾಮ್ ಪ್ರಸಾದ್
ಲಂಕೆ ಸಿನಿಮಾ ನಿರ್ದೇಶಕ ರಾಮ್ ಪ್ರಸಾದ್
Updated on

ಲೂಸ್ ಮಾದ ಯೋಗಿ, ಕೃಷಿ ತಾಪಂಡ ಮತ್ತು ಸುಚೇಂದ್ರ ನಟಿಸಿದ್ದ ಲಂಕೆ ಸಿನಿಮಾಗೆ ನಿರ್ದೇಶಕ ರಾಮ್ ಪ್ರಸಾದ್ ಆ್ಯಕ್ಷನ್ ಕಟ್ ಹೇಳಿದ್ದರು, ಸಿನಿಮಾ ಯಶಸ್ಸು ಕೂಡ ಕಂಡಿತ್ತು.

ಈಗ ಮತ್ತೊಂದು ಸಿನಿಮಾಗೆ  ನಿರ್ದೇಶನ ಮಾಡಲು ಸಜ್ಜಾಗುತ್ತಿದ್ದಾರೆ.  ಹಿಂದಿಯಮಾದ ಕಮರ್ಷಿಯಲ್ ಸಿನಿಮಾವನ್ನು ಕನ್ನಡಕ್ಕೆ ತರುತ್ತಿದ್ದಾರೆ, ಇದೊಂದು ಆ್ಯಕ್ಷನ್ ಓರಿಯೆಂಟೆಡ್ ಚಿತ್ರವಾಗಿದೆ.

ಇದು ಸೈಕಲಾಜಿಕಲ್ ಥ್ರಿಲ್ಲರ್ ಆಗಲಿದ್ದು, ಪ್ರಿಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿವೆ ಎಂದು ರಾಮ್ ಪ್ರಸಾದ್ ಹೇಳಿದ್ದಾರೆ.

ಚಿತ್ರದಲ್ಲಿ ಇಬ್ಬರು ಮಹಿಳಾ ನಾಯಕಿಯರು ಇರುತ್ತಾರೆ. ಎಸ್ಟರ್ ನೊರೊನ್ಹಾ ಮತ್ತು ಪೂಜಾ ರಾಮಚಂದ್ರ ಆಯ್ಕೆಯಾಗಿದ್ದಾರೆ. ಆದರೆ ನಾಯಕ ಯಾರು ಎಂಬ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ.

ಶೀಘ್ರದಲ್ಲೇ ಸಿನಿಮಾದ ನಾಯಕ ಮತ್ತು ಮತ್ತಷ್ಟು ವಿವರಗಳನ್ನು ಬಹಿರಂಗ ಪಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಈ ಹಿಂದೆ ಲಂಕೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಮತ್ತು ಸಂಕಲನಕಾರ ಹರೀಶ್ ಕೊಮ್ಮೆ ಈ ಸಿನಿಮಾದಲ್ಲಿ ಮತ್ತೊಮ್ಮೆ ಜೊತೆಯಾಗಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com