'ಪದವಿ ಪೂರ್ವ'ವನ್ನು ಮೊದಲಿಗೆ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಗೆ ಸಲ್ಲಿಸಲು ಬರೆಯಲಾಗಿತ್ತು: ನಿರ್ದೇಶಕ ಹರಿಪ್ರಸಾದ್

ಟೆಕ್ಕಿಯಾಗಿದ್ದ ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರು ಸಿನಿಮಾ ಮೇಲಿನ ಆಸಕ್ತಿಯಿಂದಾಗಿ ಹತ್ತು ವರ್ಷಗಳ ಹಿಂದೆ ಅಮೆರಿಕದಲ್ಲಿನ ಉದ್ಯೋಗವನ್ನು ತೊರೆದು ಬಂದರು. ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಒಂದು ವರ್ಷದ ಕೋರ್ಸ್ ಮಾಡಿದ ನಂತರ, ನಿರ್ದೇಶಕ ಯೋಗರಾಜ್ ಭಟ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಲು ಮುಂದಾದರು.
ಪದವಿ ಪೂರ್ವ ಚಿತ್ರದ ದೃಶ್ಯ

ಆದಾಗ್ಯೂ, ಅವರ ಚೊಚ್ಚಲ ಚಿತ್ರವನ್ನು ಕಿಕ್‌ಸ್ಟಾರ್ಟ್ ಮಾಡುವುದು ಸುಲಭದ ಪ್ರಕ್ರಿಯೆಯಾಗಿರಲಿಲ್ಲ. ಎರಡು ತಪ್ಪು ಹೆಜ್ಜೆಗಳ ನಂತರವೇ ಅವರು ಅಂತಿಮವಾಗಿ ಪದವಿ ಪೂರ್ವ ಸಿನಿಮಾದ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ. 'ನಾನು ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಉತ್ತಮ ಕೆಲಸವನ್ನು ಹೊಂದಿದ್ದೆ ಮತ್ತು ಉತ್ತಮ ಸಂಬಳವನ್ನು ಪಡೆಯುತ್ತಿದ್ದೆ. ಆದರೆ, ಅದು ನನ್ನ ಹೃದಯ ಹಂಬಲಿಸಿದ ತೃಪ್ತಿಯನ್ನು ನೀಡಲಿಲ್ಲ. ನಮಗೆ ಒಂದೇ ಜೀವನ ಇರುವುದರಿಂದ, ನಾನು ಯಾವುದೇ ವಿಷಾದವಿಲ್ಲದೆ ಬದುಕಲು ಬಯಸುತ್ತೇನೆ' ಎನ್ನುತ್ತಾರೆ ಹರಿಪ್ರಸಾದ್.

'ಮೊದಲಿಗೆ, ಫಿಲ್ಮ್ ಅಕಾಡೆಮಿಯಲ್ಲಿ ತನ್ನ ಅಂತಿಮ ಯೋಜನೆಗಾಗಿ ಪದವಿ ಪೂರ್ವ ಪ್ರಬಂಧವಾಗಿ ಪ್ರಾರಂಭವಾಯಿತು. ಆದರೆ, ನಾನು ಚಿತ್ರದ ನೇಟಿವಿಟಿ ಮತ್ತು ಅವಧಿಯ ಟೈಮ್‌ಲೈನ್‌ಗೆ ಜೀವ ತುಂಬಲು ಸಾಧ್ಯವಾಗಲಿಲ್ಲ. ಅಲ್ಲದೆ, ಪದವಿ ಪೂರ್ವ ಸಿನಿಮಾಗೆ ಅನೇಕ ನಟರ ಅಗತ್ಯವಿತ್ತು. ಹಾಗಾಗಿ ಇದನ್ನು ಕೈಬಿಟ್ಟು ಮತ್ತೊಂದು ಯೋಜನೆಯನ್ನು ಸಲ್ಲಿಸಿದ್ದೇನೆ. ನನ್ನ ಚೊಚ್ಚಲ ಸಿನಿಮಾ ಪದವಿ ಪೂರ್ವ ಎಂದು ಆಗಲೇ ನಿರ್ಧರಿಸಿದ್ದೆ' ಎಂದು ಹರಿಪ್ರಸಾದ್ ವಿವರಿಸುತ್ತಾರೆ.

ಫ್ರೆಶರ್‌ಗಳೊಂದಿಗೆ ಚಲನಚಿತ್ರ ಮಾಡುವುದು ಉತ್ತಮವಾಗಿದೆ. ಆದರೆ, ಅದು ಸುಲಭದ ಪ್ರಕ್ರಿಯೆಯಲ್ಲ. ಹೀಗಿದ್ದರೂ, ಹರಿಪ್ರಸಾದ್ ಅವರು ಇದೇ ರೀತಿಯಲ್ಲಿ ಸಿನಿಮಾ ಮಾಡಲು ಅಚಲವಾಗಿದ್ದರು. 'ಯಾವುದೇ ನಿರ್ಮಾಪಕರು 19 ವರ್ಷದ ನಾಯಕನಿಗೆ ಬಂಡವಾಳ ಹೂಡಲು ಆಸಕ್ತಿ ಹೊಂದಿರುವುದಿಲ್ಲ ಮತ್ತು ಪ್ರತಿಯೊಬ್ಬರೂ ಕಮರ್ಷಿಯಲ್ ಅಂಶವನ್ನು ಹುಡುಕುತ್ತಿರುತ್ತಾರೆ' ಎಂದು ನಿರ್ದೇಶಕರು ಹೇಳುತ್ತಾರೆ.

ಪದವಿ ಪೂರ್ವ ತಂಡದೊಂದಿಗಿನ ತಮ್ಮ ಪ್ರಯಾಣದ ಕುರಿತು ಮಾತನಾಡಿದ ಹರಿಪ್ರಸಾದ್, ಸಾಂಕ್ರಾಮಿಕ ರೋಗವು ಕಾಸ್ಟಿಂಗ್, ರಿಹರ್ಸಲ್ ಮತ್ತು ತಯಾರಿ ಕೆಲಸಗಳಿಗೆ ಸಹಾಯ ಮಾಡಿದೆ. ಪದವಿ ಪೂರ್ವ ಸಿನಿಮಾವನ್ನು ತಯಾರಿಸಲು ಸಾಕಷ್ಟು ವಿವರಗಳಿವೆ. ಇದರಲ್ಲಿ ಕಾಸ್ಟ್ಯೂಮ್‌, ವಾತಾವರಣ ಮತ್ತು ಬ್ಯಾಗ್‌ಗಳು, ಜ್ಯಾಮಿಟ್ರಿ ಬಾಕ್ಸ್, ಸೈಕಲ್‌ಗಳು ಮುಂತಾದ ಚಿಕ್ಕ ಚಿಕ್ಕ ವಸ್ತುಗಳನ್ನು ಸಹ ಒಳಗೊಂಡಿತ್ತು... ಲಾಕ್‌ಡೌನ್ ಈ ಯುವಕರೊಂದಿಗೆ ಬಾಂಧವ್ಯವನ್ನು ಬೆಳೆಸಲು ನನಗೆ ಸಹಾಯ ಮಾಡಿತು. ಪ್ರತಿಯೊಬ್ಬರೂ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದಾರೆ ಎಂದು ಹೇಳಿದರು.

'ಯಾವುದೇ ಹೊಸಬರಾದರೂ ರೆಡ್ ಕಾರ್ಪೆಟ್ ಸ್ವಾಗತ ಸಿಗುವುದಿಲ್ಲ ಎಂಬುದನ್ನು ನಾವು ತಿಳಿದಿರಬೇಕು. ಪ್ರೀ ರಿಲೀಸ್ ವ್ಯವಹಾರ ಕಷ್ಟ ಎಂದು ನನಗೆ ತಿಳಿದಿತ್ತು. ಆದರೆ, ಸಿನಿಮಾದ ಮೇಲೆ ನನಗೆ ನಂಬಿಕೆಯಿದೆ ಮತ್ತು ಅದು ಬಿಡುಗಡೆಯಾದ ನಂತರ ಸಾಬೀತಾಗುತ್ತದೆ. ಅಲ್ಲದೆ, ನಾವು ಉತ್ತಮ ನಿರ್ಮಾಣ ತಂಡವನ್ನು ಹೊಂದಿದ್ದೇವೆ ಮತ್ತು ನನ್ನ ಗುರುಗಳಾದ ಯೋಗರಾಜ್ ಭಟ್ ಅವರ ಉತ್ತಮ ಬೆಂಬಲವಿದೆ. ಅವರು ರವಿ ಶಾಮನೂರು ಅವರೊಂದಿಗೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಭಟ್ರು ನನ್ನ ವೃತ್ತಿಜೀವನ ಮತ್ತು ನನ್ನ ವೈಯಕ್ತಿಕ ಜೀವನದ ಶಕ್ತಿಯಾಗಿದ್ದಾರೆ. ಇವರೊಂದಿಗೆ ಬರಹಗಾರ ಯೋಗಿ, ಡಿಒಪಿ ಸಂತೋಷ್ ರೈ ಪತಾಜೆ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯ ಕೂಡ ಚಿತ್ರದ ಉನ್ನತಿಗೆ ಕಾರಣರಾಗಿದ್ದಾರೆ' ಎನ್ನುತ್ತಾರೆ ಹರಿಪ್ರಸಾದ್.

ಪದವಿ ಪೂರ್ವ ಸಿನಿಮಾದಲ್ಲಿ ಪೃಥ್ವಿ ಶಾಮನೂರು, ಅಂಜಲಿ ಅನೀಶ್ ಮತ್ತು ಯಶ ಶಿವಕುಮಾರ್ ನಾಯಕರಾಗಿ ನಟಿಸಿದ್ದು, ಇದು 90ರ ದಶಕದ ಕಾಲೇಜಿನ ಕಥೆಯನ್ನು ಹೊಂದಿದೆ.  ಚಿತ್ರದಲ್ಲಿ ಅದಿತಿ ಪ್ರಭುದೇವ, ಶ್ರೀ ಮಹಾದೇವ್ ಮತ್ತು ದಿವ್ಯಾ ಉರುಡುಗ ಸೇರಿದಂತೆ ಇತರರು ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ.

'ತಲೆಮಾರುಗಳು ಬದಲಾಗುತ್ತವೆ, ಆದರೆ ಸ್ನೇಹಿತರ ನಡುವಿನ ಭಾವನೆಗಳು ಗಟ್ಟಿಯಾಗುತ್ತಲೇ ಇರುತ್ತವೆ ಮತ್ತು ಇದನ್ನೇ ನಾನು ಪದವಿ ಪೂರ್ವದ ಮೂಲಕ ಹೈಲೈಟ್ ಮಾಡಲು ಪ್ರಯತ್ನಿಸಿದೆ' ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com