ತಮಿಳು-ತೆಲುಗಿನ 'ರೇನ್‌ಬೋ'ದಲ್ಲಿ ರಶ್ಮಿಕಾ ಮಂದಣ್ಣ!

ತಮಿಳು- ತೆಲುಗಿನ ಹೊಸ ಚಿತ್ರ 'ರೇನ್ ಬೋ'ದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೇವ ಮೋಹನ್ ನಾಯಕ ನಟನಾಗಿರುವ ಈ ಸಿನಿಮಾವನ್ನು ಮೊದಲ ಬಾರಿಗೆ ಶಾಂತರುಬನ್ ನಿರ್ದೇಶಿಸುತ್ತಿದ್ದಾರೆ.
ರೇನ್ ಬೋದಲ್ಲಿ ರಶ್ಮಿಕಾ ಮಂದಣ್ಣ
ರೇನ್ ಬೋದಲ್ಲಿ ರಶ್ಮಿಕಾ ಮಂದಣ್ಣ
Updated on

ಹೈದ್ರಾಬಾದ್: ತಮಿಳು- ತೆಲುಗಿನ ಹೊಸ ಚಿತ್ರ 'ರೇನ್ ಬೋ'ದಲ್ಲಿ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ದೇವ ಮೋಹನ್ ನಾಯಕ ನಟನಾಗಿರುವ ಈ ಸಿನಿಮಾವನ್ನು ಮೊದಲ ಬಾರಿಗೆ ಶಾಂತರುಬನ್ ನಿರ್ದೇಶಿಸುತ್ತಿದ್ದಾರೆ.

ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಶಾಂತರುಬನ್, ಇದು ರೋಮ್ಯಾಂಟಿಕ್ ಫ್ಯಾಂಟಸಿ ಚಿತ್ರವಾಗಿದೆ ಎಂದು ತಿಳಿಸಿದರು. ಮಹಿಳಾ ಕೇಂದ್ರಿತ ಚಿತ್ರದಲ್ಲಿ ರಶ್ಮಿಕಾ ಮೊದಲ ಬಾರಿಗೆ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ನಿರ್ದೇಶಕರು ಗಮನಿಸುತ್ತಿದ್ದಾರೆ. ಶುಕ್ರವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಹಂತ 20-25 ದಿನಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿದ್ದು, ಕೇವಲ ಹಾಡುಗಳು ಮಾತ್ರವಲ್ಲದೇ, ಬಹುತೇಕ ದೃಶ್ಯಗಳಲ್ಲಿ ಮ್ಯೂಸಿಕ್ ಹೆಚ್ಚಾಗಿರುತ್ತದೆ. ಸದ್ಯಕ್ಕೆ 4-5 ಹಾಡುಗಳಿಗೆ ಪ್ಲಾನ್ ಮಾಡಲಾಗಿದೆ ಎಂದು ಶಾಂತರುಬನ್ ತಿಳಿಸಿದರು.  ಚಿತ್ರದ ಘೋಷಣೆ ಕುರಿತು ಪ್ರತಿಕ್ರಿಯಿಸಿದ ರಶ್ಮಿಕಾ,  ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರವನ್ನು ಜೀವಂತಗೊಳಿಸಲು ಉತ್ಸುಕಳಾಗಿದ್ದೇನೆ. ರೋನ್ ಬೋ ಖಂಡಿತವಾಗಿಯೂ ಪ್ರೇಕ್ಷಕರಿಗೆ ಮನೋರಂಜನೆ ಮತ್ತು ಕುತೂಹಲ ಮೂಡಿಸುತ್ತದೆ ಎಂದಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com