ದಿಗಂತ್, ಧನ್ಯಾ ರಾಮ್‌ಕುಮಾರ್ ಅಭಿನಯದ 'ಪೌಡರ್' ಚಿತ್ರೀಕರಣ ಬೆಂಗಳೂರಿನಲ್ಲಿ

ಪೌಡರ್ ಚಿತ್ರದ ಆರಂಭಿಕ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಮುಕ್ತಾಯವಾಗಿದೆ. ಕೆಆರ್‌ಜಿ ಸ್ಟುಡಿಯೋಸ್ ಮತ್ತು ಟಿವಿಎಫ್ ಮೋಷನ್ ಪಿಕ್ಚರ್ಸ್ ಬೆಂಬಲಿತ ಈ ಕಾಮಿಡಿ ಎಂಟರ್‌ಟೈನರ್‌ನ ಮೊದಲ ಶೆಡ್ಯೂಲ್ 30 ದಿನಗಳಲ್ಲಿ ಪೂರ್ಣಗೊಂಡಿದೆ. 
ಪೌಡರ್ ಸಿನಿಮಾದ ನಿರ್ದೇಶಕ

ದಿಗಂತ್, ಧನ್ಯಾ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅಚ್ಯುತ್ ಕುಮಾರ್, ಅನಿರುದ್ಧ್ ಆಚಾರ್ಯ ಮತ್ತು ರವಿಶಂಕರ್ ಗೌಡ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಪ್ರಕ್ರಿಯೆಯು ಲಗುಬಗೆಯಿಂದ ಸಾಗುತ್ತಿದೆ ಎಂದು ಹೇಳಲಾಗುತ್ತಿದೆ.

<strong>ಶರ್ಮಿಳಾ ಮಾಂಡ್ರೆ, ದಿಗಂತ್ ಮತ್ತು ಧನ್ಯ ರಾಮ್‌ಕುಮಾರ್</strong>
ಶರ್ಮಿಳಾ ಮಾಂಡ್ರೆ, ದಿಗಂತ್ ಮತ್ತು ಧನ್ಯ ರಾಮ್‌ಕುಮಾರ್

ಪೌಡರ್ ತಂಡ ಈಗ ಬೆಂಗಳೂರಿನಲ್ಲಿ ಮುಂದಿನ ಹಂತದ ಚಿತ್ರೀಕರಣಕ್ಕೆ ಸಜ್ಜಾಗಿದೆ. ಈ ಹಿಂದೆ ಗುಲ್ಟು ಸಿನಿಮಾವನ್ನು ನಿರ್ದೇಶಿಸಿದ್ದ ಜನಾರ್ಧನ್ ಚಿಕ್ಕಣ್ಣ ನಿರ್ದೇಶಿಸಿರುವ ಈ ಹಾಸ್ಯಮಯ ಎಂಟರ್‌ಟೈನರ್ ಎಲ್ಲಾ ವಯಸ್ಸಿನ ಪ್ರೇಕ್ಷಕರನ್ನು ರಂಜಿಸುವ ಗುರಿಯನ್ನು ಹೊಂದಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com