'ಲವ್ ಬರ್ಡ್ಸ್' ಚಿತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ ಪಾತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ ಪಿಸಿ ಶೇಖರ್

ಈ ಹಿಂದೆ ಲವ್ ಬರ್ಡ್ಸ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದ್ದ ನಿರ್ದೇಶಕ ಪಿಸಿ ಶೇಖರ್, ಸಿನಿಮಾದಲ್ಲಿ ವಕೀಲೆ ಮಾಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಂಯುಕ್ತಾ ಹೊರನಾಡ್ ಅವರ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.
ಲವ್ ಬರ್ಡ್ಸ್ ಸಿನಿಮಾದಲ್ಲಿ ನಟಿ ಸಂಯುಕ್ತಾ ಹೊರನಾಡ್ ಅವರ ಪಾತ್ರದ ಫಸ್ಟ್ ಲುಕ್
ಲವ್ ಬರ್ಡ್ಸ್ ಸಿನಿಮಾದಲ್ಲಿ ನಟಿ ಸಂಯುಕ್ತಾ ಹೊರನಾಡ್ ಅವರ ಪಾತ್ರದ ಫಸ್ಟ್ ಲುಕ್
Updated on

ಈ ಹಿಂದೆ ಲವ್ ಬರ್ಡ್ಸ್ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅವರ ಪಾತ್ರದ ಫಸ್ಟ್ ಲುಕ್ ಅನ್ನು ಬಹಿರಂಗಪಡಿಸಿದ್ದ ನಿರ್ದೇಶಕ ಪಿಸಿ ಶೇಖರ್, ಚಿತ್ರದ ಮತ್ತೊಂದು ಪಾತ್ರದ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದ್ದಾರೆ. ಈ ಬಾರಿ ಅವರು ಸಿನಿಮಾದಲ್ಲಿ ವಕೀಲೆ ಮಾಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸಂಯುಕ್ತಾ ಹೊರನಾಡ್ ಅವರ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಮಾಯಾ ಧೈರ್ಯಶಾಲಿ ಹುಡುಗಿ ಮತ್ತು ಯಶಸ್ವಿ ವಕೀಲೆ. ಆಕೆ ಕೃಷ್ಣ ಮತ್ತು ಮಿಲನಾ ಪಾತ್ರಧಾರಿಗಳಾದ ದೀಪಕ್ ಮತ್ತು ಪೂಜಾ ಇಬ್ಬರಿಗೂ ಸ್ನೇಹಿತೆ ಎಂದು ನಿರ್ದೇಶಕರು ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಸಂಯುಕ್ತಾ ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ.

ಮದುವೆಯ ನಂತರ ಯಶಸ್ವಿ ಜೀವನ ನಡೆಸುತ್ತಿರುವ ಜೋಡಿಯ ಕುರಿತಾದ ಚಿತ್ರವಾದ ಲವ್ ಬರ್ಡ್ಸ್ ಅನ್ನು ಶ್ರೀಬನಶಂಕರಿ ಚಿತ್ರಾಲಯ ಬ್ಯಾನರ್ ಅಡಿಯಲ್ಲಿ ಕಡ್ಡಿಪುಡಿ ಚಂದ್ರು ಅವರು ನಿರ್ಮಿಸಿದ್ದಾರೆ. ಚಿತ್ರದ ಸಂಗೀತವನ್ನು ಅರ್ಜುನ್ ಜನ್ಯ ಸಂಯೋಜಿಸಿದ್ದು, ಮೊದಲ ಹಾಡು ಜನವರಿ 22 ರಂದು ಅನಾವರಣಗೊಳ್ಳಲಿದೆ. ಶಕ್ತಿ ಶೇಖರ್ ಚಿತ್ರದ ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com