ಜೆಕೆ ಅಭಿನಯದ 'ಐರಾವನ್' ಚಿತ್ರ ಜೂನ್ 16ಕ್ಕೆ ಬಿಡುಗಡೆ

ಅಶ್ವಿನಿ ನಕ್ಷತ್ರ, ಬಿಗ್ ಬಾಸ್ ಮೂಲಕ ಮನೆ ಮಾತಾದ ಕಿರುತೆರೆಯ ಸೂಪರ್ ಸ್ಟಾರ್ ಜೆಕೆ (ಜಯರಾಮ್ ಕಾರ್ತಿಕ್) ಅಭಿನಯದ ಐರಾವನ್ ಚಿತ್ರ ಜೂನ್16ಕ್ಕೆ ಬಿಡುಗಡೆಯಾಗಲಿದೆ.
ಜಯರಾಮ್ ಕಾರ್ತಿಕ್
ಜಯರಾಮ್ ಕಾರ್ತಿಕ್

ಅಶ್ವಿನಿ ನಕ್ಷತ್ರ, ಬಿಗ್ ಬಾಸ್ ಮೂಲಕ ಮನೆ ಮಾತಾದ ಕಿರುತೆರೆಯ ಸೂಪರ್ ಸ್ಟಾರ್ ಜೆಕೆ (ಜಯರಾಮ್ ಕಾರ್ತಿಕ್) ಅಭಿನಯದ ಐರಾವನ್ ಚಿತ್ರ ಜೂನ್16ಕ್ಕೆ ಬಿಡುಗಡೆಯಾಗಲಿದೆ.

ಚಿತ್ರತಂಡ ಚಿತ್ರದ ಕುರಿತು ಇತ್ತೀಗಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಚಿತ್ರದ ಕುರಿತು ಜಯರಾಮ್ ಕಾರ್ತಿಕ್ ಅವರು ಮಾತನಾಡಿದ್ದಾರೆ.

ಐರಾವನ್ ಚಿತ್ರದ ಟೀಸರ್'ಗೆ ಉತ್ತಮ ಪ್ರತಿಕ್ರಿಯೆಗಳು ಬಂದಿದೆ. ಅದಕ್ಕೆ ಕೃತಜ್ಞನಾಗಿದ್ದೇನೆ. ಸಾಕಷ್ಟು ಜನರು ಹಿಂದಿ ಡಬ್ಬಿಂಗ್ ಎಂದು ತಪ್ಪು ಕಲ್ಪನೆ ಹೊಂದಿದ್ದಾರೆ. ಆದರೆ, ಇದು ಕನ್ನಡದ್ದೇ ಚಿತ್ರ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ರಾಮ್ ಅವರು ಅತ್ಯುತ್ತಮ ಕಥೆಯನ್ನು ಹೆಣೆದಿದ್ದಾರೆ, ಚಿತ್ರದಲ್ಲಿ ಅತ್ಯುತ್ತಮ ಹಾಡುಗಳಿವೆ ಎಂದು ಹೇಳಿದರು.

ಮಹಾಭಾರತದಲ್ಲಿನ ಪಾತ್ರವೊಂದರಿಂದ ಸ್ಫೂರ್ತಿ ಪಡೆದು ಚಿತ್ರದ ಕಥೆಯನ್ನು ಬರೆಯಲಾಗಿದೆ. ಸಸ್ಪೆನ್ಸ್‌ಫುಲ್ ಕಥಾಹಂದರವನ್ನು ಹೊಂದಿದೆ. ಬೆಂಗಳೂರು ಹಾಗೂ ಮಂಗಳೂರಿನ ವಿವಿಧ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗ ಇದ್ದಂತಹ ಸಂದರ್ಭದಲ್ಲಿ ಚಿತ್ರದ ಕಥೆಯನ್ನು ಬರೆಯಲಾಗಿತ್ತು. ಸಿನಿಮಾ ಮಾಡುವುದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ ಎಂದು ನಂಬಿದ್ದೆ. ಚಿತ್ರತಂಡದ ಸಹಯೋಗ ಕಥೆಗೆ ಜೀವ ತುಂಬಿದಂತಾಗಿದೆ. ಚಿತ್ರ ಇದೀಗ ಬಿಡುಗಡೆಗೆ ಸಜ್ದಾಗಿದೆ ಎಂದು ನಿರ್ಮಾಪಕ ಡಾ.ನಿರಂತರ ಗಣೇಶ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com