'ರುದ್ರ ಗರುಡ ಪ್ರಯಾಣ'ದಲ್ಲಿ ರಿಷಿಗೆ ಪ್ರಿಯಾಂಕ ಕುಮಾರ್ ನಾಯಕಿ!

ಚೊಚ್ಚಲ ಸಿನಿಮಾ ರಿಲೀಸ್ ಆಗುವ ಮನ್ನವೇ ನಟಿ ಪ್ರಿಯಾಂಕಾ ಕುಮಾರ್ 4ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ನಂದೀಶ್ ನಿರ್ದೇಶನದ ರಿಷಿಯ ಮುಂಬರುವ ಆಕ್ಷನ್ ಚಿತ್ರಕ್ಕೆ ಅಧಿಕೃತವಾಗಿ ರುದ್ರ ಗರುಡ ಪುರಾಣ ಎಂದು ಹೆಸರಿಡಲಾಗಿದೆ.
ಪ್ರಿಯಾಂಕ ಕುಮಾರ್
ಪ್ರಿಯಾಂಕ ಕುಮಾರ್

ಚೊಚ್ಚಲ ಸಿನಿಮಾ ರಿಲೀಸ್ ಆಗುವ ಮನ್ನವೇ ನಟಿ ಪ್ರಿಯಾಂಕಾ ಕುಮಾರ್ 4ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ನಂದೀಶ್ ನಿರ್ದೇಶನದ ರಿಷಿಯ ಮುಂಬರುವ ಆಕ್ಷನ್ ಚಿತ್ರಕ್ಕೆ ಅಧಿಕೃತವಾಗಿ ರುದ್ರ ಗರುಡ ಪುರಾಣ ಎಂದು ಹೆಸರಿಡಲಾಗಿದೆ.

ಸತೀಶ್ ನೀನಾಸಂ ಅವರ ಸಮ್ಮುಖದಲ್ಲಿ ಶುಕ್ರವಾರ ಚಿತ್ರದ ಅದ್ಧೂರಿ ಮುಹೂರ್ತ ನೆರವೇರಿತು. ಚಂಬಲ್ ಮತ್ತು ಡಿಯರ್ ವಿಕ್ರಮ್ ಚಿತ್ರಗಳಿಗೆ ಹೆಸರುವಾಸಿಯಾದ ನಂದೀಶ್ ಅವರು ಲೋಹಿತ್ ನಿರ್ಮಾಣದ ಈ ಯೋಜನೆಯನ್ನು ನಿರ್ದೇಶಿಸುತ್ತಿದ್ದಾರೆ.

ಕವಲುದಾರಿಯಲ್ಲಿನ ಪಾತ್ರದ ನಂತರ ರಿಷಿ ಮತ್ತೊಮ್ಮೆ ಪೊಲೀಸ್ ಅಧಿಕಾರಿಯಾಗಿ  ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದು. ಉದ್ಯಮಿ ಲೋಹಿತ್ ನಿರ್ಮಾಣ ಮಾಡುತ್ತಿದ್ದಾರೆ. ರಿಷಿ ಅವರಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ಅಭಿನಯಿಸುತ್ತಿದ್ದಾರೆ.

<strong>ಪ್ರಿಯಾಂಕಾ ಕುಮಾರ್</strong>
ಪ್ರಿಯಾಂಕಾ ಕುಮಾರ್

ಬ್ಯಾಡ್ ಮ್ಯಾನರ್ಸ್ ನಲ್ಲಿ  ಅಭಿಷೇಕ್ ಅಂಬರೀಷ್ ಜೊತೆ ನಟಿಸಿರುವ ಪ್ರಿಯಾಂಕಾ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ, ಅದರ ಜೊತೆಗೆ ನಾಲ್ಕು ಸಿನಿಮಾಗಳು ಪ್ರಿಯಾಂಕಾ ಕೈಯ್ಯಲ್ಲಿವೆ, ನಂದೀಶ್ ಅವರು ಈ ಚಿತ್ರದ ಕಥೆ ಕೇಳಿದಾಗ ಬಹಳ ಇಷ್ಟವಾಯಿತು. ಎರಡೂ ಚಿತ್ರಗಳ ಮಧ್ಯೆ ಯಾವುದೇ ಹೋಲಿಕೆ ಇಲ್ಲ. ಇದರಲ್ಲಿ ನಾನು ಪೊಲೀಸ್ ಅಧಿಕಾರಿಯಾದರೂ ಬಹಳ ವಿಭಿನ್ನವಾಗಿದೆ.

ಜೊತೆಗೆ ಕರ್ಮ, ಪಾಪ, ಪುಣ್ಯಕ್ಕೆ ಸಂಬಂಧಿಸಿದ ಗರುಡ ಪುರಾಣದ ಸಾಕಷ್ಟು ಅಂಶಗಳು ಈ ಚಿತ್ರದಲ್ಲಿದೆ. ಈ ಚಿತ್ರಕ್ಕೆ “ಗರುಡ ಪುರಾಣ” ಎಂದು ಹೆಸರಿಡಲು ನಿರ್ಧರಿಸಿದ್ದೆವು. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರುದ್ರ. ಹಾಗಾಗಿ “ರುದ್ರ ಗರುಡ ಪುರಾಣ” ಅಂತ ಶೀರ್ಷಿಕೆ ಇಡಲಾಗಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com