ಫ್ಯಾಶನ್ ಉದ್ಯಮಿ ರೂಪಾಲಿ ಬರುವಾ ಜೊತೆ ನಟ ಆಶೀಶ್ ವಿದ್ಯಾರ್ಥಿ 2ನೇ ವಿವಾಹ 

ಸ್ಯಾಂಡಲ್ ವುಡ್ ನಲ್ಲಿ ಖಳನಟನಾಗಿ ಖ್ಯಾತಿ ಪಡೆದಿರುವ ಆಶೀಶ್ ವಿದ್ಯಾರ್ಥಿ ತಮ್ಮ 60 ನೇ ವಯಸ್ಸಿನಲ್ಲಿ 2 ನೇ ವಿವಾಹವಾಗಿದ್ದಾರೆ. 
ಆಶೀಶ್ ವಿದ್ಯಾರ್ಥಿ 2ನೇ ವಿವಾಹ
ಆಶೀಶ್ ವಿದ್ಯಾರ್ಥಿ 2ನೇ ವಿವಾಹ
Updated on

ನವದೆಹಲಿ: ಸ್ಯಾಂಡಲ್ ವುಡ್ ನಲ್ಲಿ ಖಳನಟನಾಗಿ ಖ್ಯಾತಿ ಪಡೆದಿರುವ ಆಶೀಶ್ ವಿದ್ಯಾರ್ಥಿ ತಮ್ಮ 60 ನೇ ವಯಸ್ಸಿನಲ್ಲಿ 2 ನೇ ವಿವಾಹವಾಗಿದ್ದಾರೆ. 

ಅಸ್ಸಾಂ ಮೂಲದ ರೂಪಾಲಿ ಬರುವಾ ಅವರನ್ನು ಅಶೀಶ್ ವಿದ್ಯಾರ್ಥಿ ವರಿಸಿದ್ದಾರೆ. ಈ ಹಿಂದೆ ಖ್ಯಾತ ನಟಿ ಶಕುಂತಲಾ ಬರುವಾ ಅವರ ಪುತ್ರಿ ನಟಿ, ರಂಗಭೂಮಿ ಕಲಾವಿದೆ ಹಾಗೂ ಗಾಯಕಿ ರಾಜೋಶಿ ಬರುವಾ ಅವರನ್ನು ಆಶೀಶ್ ವಿದ್ಯಾರ್ಥಿ ವಿವಾಹವಾಗಿದ್ದರು. 

ಆಶೀಶ್ ವಿದ್ಯಾರ್ಥಿ ವರಿಸಿರುವ ರೂಪಾಲಿ ಬರುವಾ ಗುವಾಹಟಿ ಮೂಲದವರಾಗಿದ್ದು, ಫ್ಯಾಶನ್ ಉದ್ಯಮಿಯಾಗಿದ್ದಾರೆ. ಬಹುಭಾಷಾ ನಟರಾಗಿರುವ ಆಶೀಶ್ ವಿದ್ಯಾರ್ಥಿ, ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕಾಲ್ ಸಂಧ್ಯಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಆಶೀಶ್ ವಿದ್ಯಾರ್ಥಿ, ಕನ್ನಡದಲ್ಲಿ ಕೋಟಿಗೊಬ್ಬ, ನಮ್ಮಣ್ಣ, ತಂದೆಗೆ ತಕ್ಕ ಮಗ, ಎಕೆ 47  ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com