'ಕ್ಯಾಪಿಟಲ್ ಸಿಟಿ' ಚಿತ್ರಕ್ಕೆ ಆರ್ ಅನಂತರಾಜು ಆ್ಯಕ್ಷನ್ ಕಟ್; ಜನವರಿ ಅಂತ್ಯಕ್ಕೆ ಬಿಡುಗಡೆಗೆ ಸಿದ್ಧತೆ

ಕ್ಯಾಪಿಟಲ್ ಸಿಟಿಯು ಬೆಂಗಳೂರಿನ ಸಮಗ್ರ ಭೂಗತ ಜಗತ್ತಿನ ಬಗ್ಗೆ ಹೇಳುತ್ತದೆ. ತೊಂದರೆಗೊಳಗಾದ ನಾಯಕನ ಪ್ರಯಾಣವನ್ನು ಮತ್ತು ಆತ ಎದುರಿಸುವ ವಿವಿಧ ಸವಾಲುಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ.
ಕ್ಯಾಪಿಟಲ್ ಸಿಟಿ ಚಿತ್ರದ ಸ್ಟಿಲ್
ಕ್ಯಾಪಿಟಲ್ ಸಿಟಿ ಚಿತ್ರದ ಸ್ಟಿಲ್
Updated on

ಇತ್ತೀಚೆಗಷ್ಟೇ ಕ್ಯಾಪಿಟಲ್ ಸಿಟಿ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖ ವ್ಯಕ್ತಿಗಳು ಪಾಲ್ಗೊಂಡಿದ್ದರು. ಅಪ್ಪು ಪಪ್ಪು, ಮಸ್ತ್ ಮಜಾ ಮಾಡಿ ಮತ್ತು ನಂದಾ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಆರ್ ಅನಂತರಾಜು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ರಾಜೀವ್ ರೆಡ್ಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇನ್ಫಿನಿಟಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರ ತಂಡ ನಿರ್ಮಿಸಿರುವ ಈ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಸಿಕೆ ರಾಮಮೂರ್ತಿ ಅವರು ಶಿವಲಿಂಗೇಶ್ವರ ಶಾಂತಮುನಿ ಸ್ವಾಮೀಜಿ ಮತ್ತು ಆದಿತ್ಯ ಸ್ವಾಮೀಜಿ ಮತ್ತು ಇತರ ಪ್ರಮುಖರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ನಿರ್ದೇಶಕ ಅನಂತರಾಜು ಅವರು ಚಿತ್ರ ನಿರ್ಮಾಣದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಕ್ಯಾಪಿಟಲ್ ಸಿಟಿಯು ಬೆಂಗಳೂರಿನ ಸಮಗ್ರ ಭೂಗತ ಜಗತ್ತಿನ ಬಗ್ಗೆ ಹೇಳುತ್ತದೆ. ತೊಂದರೆಗೊಳಗಾದ ನಾಯಕನ ಪ್ರಯಾಣವನ್ನು ಮತ್ತು ಆತ ಎದುರಿಸುವ ವಿವಿಧ ಸವಾಲುಗಳ ಬಗ್ಗೆ ಚಿತ್ರ ಬೆಳಕು ಚೆಲ್ಲುತ್ತದೆ. ಇದೊಂದು ಆ್ಯಕ್ಷನ್-ಪ್ಯಾಕ್ಡ್ ಚಿತ್ರವಾಗಿದ್ದು, ಪ್ರೇಕ್ಷಕರಿಗೆ ಉತ್ತಮವಾದ ಸಿನಿಮೀಯ ಅನುಭವವನ್ನು ನೀಡುತ್ತದೆ.

ನಾಯಕ ರಾಜೀವ್ ರೆಡ್ಡಿ ಮಾತನಾಡಿ, 'ಇದು ಸೇಡಿನ ಕಥೆಯಾಗಿದ್ದು, ನೀವು ತೊಂದರೆಗೊಳಗಾದಾಗ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುತ್ತೀರಿ ಎಂಬುದನ್ನು ತೋರಿಸುತ್ತದೆ' ಎಂದು ಹೇಳಿದರು.

ಚಿತ್ರದಲ್ಲಿ ಪ್ರೇರಣಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ರವಿಶಂಕರ್, ಶರತ್ ಲೋಹಿತಾಶ್ವ ಮತ್ತು ಕೆಎಸ್ ಶ್ರೀಧರ್ ಅವರಂತಹ ಹಿರಿಯ ನಟರಿದ್ದಾರೆ. ಮುಂದಿನ ವರ್ಷ ಜನವರಿ ಅಂತ್ಯದ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com