ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ: ಮೌನ ಮುರಿದ ವಿಜಯ್ ದೇವರಕೊಂಡ!

ಕಳೆದ ಕೆಲ ದಿನಗಳಿಂದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಆತ್ಮೀಯತೆ ಕುರಿತು ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ವಿಜಯ್ ದೇವರಕೊಂಡ ಅವರು ಸ್ಪಷ್ಟನೆ ನೀಡಿದ್ದಾರೆ.
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ
ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ
Updated on: 

ಹೈದರಾಬಾದ್: ಕಳೆದ ಕೆಲ ದಿನಗಳಿಂದ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ, ಆತ್ಮೀಯತೆ ಕುರಿತು ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿದ್ದು, ಈ ಬಗ್ಗೆ ವಿಜಯ್ ದೇವರಕೊಂಡ ಅವರು ಸ್ಪಷ್ಟನೆ ನೀಡಿದ್ದಾರೆ.

ಗೀತಾ ಗೋವಿಂದಂ’ , ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ ಬಳಿಕ ರಶ್ಮಿಕಾ – ದೇವರಕೊಂಡ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಇವರಿಬ್ಬರು ರಿಲೇಷನ್ ಶಿಪ್ ನಲ್ಲಿದ್ದಾರೆ ಎನ್ನುವ ಮಾತುಗಳು ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ.

ಈ ಬಗ್ಗೆ ವಿಜಯ್ ಅವರು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದು, ಮಾಧ್ಯಮದವರು ಎರಡು ವರ್ಷಕ್ಕೊಮ್ಮೆ ಮದುವೆಯಾಗುತ್ತಿದ್ದಾರೆ... ಎನ್ನುವ ವದಂತಿಯನ್ನು ಸೃಷ್ಟಿಸುತ್ತಿರುತ್ತಾರೆ... ಅವರೆಲ್ಲರೂ ನನ್ನ ಮದುವೆಗಾಗಿ ಕಾಯುತ್ತಿದ್ದಾರೆಂದು ಕಾಣಿಸುತ್ತದೆ.. ಅದಕ್ಕಾಗಿಯೇ ಅವರು ಈ ಫೆಬ್ರವರಿಯಲ್ಲಿ ನನ್ನನ್ನು ತಳುಕುಹಾಕಿದ್ದಾರೆ... ಆದರೆ ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com