ದಿಗಂತ್, ಧನ್ಯಾ ರಾಮ್‌ಕುಮಾರ್, ಶರ್ಮಿಳಾ ಮಾಂಡ್ರೆ ಅಭಿನಯದ 'ಪೌಡರ್' ಚಿತ್ರೀಕರಣ ಪೂರ್ಣ; ಜುಲೈನಲ್ಲಿ ಬಿಡುಗಡೆ

ಕನ್ನಡದ 'ಪೌಡರ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಗುರುವಾರ, ಟಿವಿಎಫ್ (ದಿ ವೈರಲ್ ಫೀವರ್) ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಪೌಡರ್ ಚಿತ್ರದ ಪೋಸ್ಟರ್
ಪೌಡರ್ ಚಿತ್ರದ ಪೋಸ್ಟರ್

ಬೆಂಗಳೂರು: ಕನ್ನಡದ 'ಪೌಡರ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಗುರುವಾರ, ಟಿವಿಎಫ್ (ದಿ ವೈರಲ್ ಫೀವರ್) ಕಂಪನಿಯು ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ದಿಗಂತ್, ಧನ್ಯಾ ರಾಮ್‌ಕುಮಾರ್ ಮತ್ತು ಶರ್ಮಿಳಾ ಮಾಂಡ್ರೆ ಅಭಿನಯದ ಪೌಡರ್ ಚಿತ್ರವು ಜುಲೈ 12 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

ಚಿತ್ರದ ಪೋಸ್ಟರ್‌ಗಳನ್ನು ಹಂಚಿಕೊಂಡಿರುವ ಟಿವಿಎಫ್, 'ಪೌಡರ್ ರುಚಿ ನೋಡಿ, ಜುಲೈ 12 ರಿಂದ ಹೆಚ್ಚಿನದನ್ನು ಪಡೆಯಿರಿ' ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದಿದೆ.

ಚಿತ್ರದಲ್ಲಿ ಅನಿರುದ್ಧ್ ಆಚಾರ್ಯ, ರಂಗಾಯಣ ರಘು, ಅಚ್ಯುತ್ ಕುಮಾರ್ ಮತ್ತು ರವಿಶಂಕರ್ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪೌಡರ್ ಚಿತ್ರಕ್ಕೆ ದೀಪಕ್ ವೆಂಕಟೇಶನ್ ಕಥೆ ಬರೆದಿದ್ದು, ಶಾಂತಿ ಸಾಗರ್ ಛಾಯಾಗ್ರಹಣವಿದೆ. ಚಿತ್ರಕ್ಕೆ ಸೀನ್ ರೋಲ್ಡನ್ ಅವರ ಸಂಗೀತ ಸಂಯೋಜನೆಯಿದೆ.

ಪೌಡರ್ ಚಿತ್ರದ ಪೋಸ್ಟರ್
ದಿಗಂತ್, ಧನ್ಯಾ ರಾಮ್‌ಕುಮಾರ್ ಅಭಿನಯದ 'ಪೌಡರ್' ಚಿತ್ರೀಕರಣ ಬೆಂಗಳೂರಿನಲ್ಲಿ

ಟಿವಿಎಫ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರವು ಮೊದಲು ಏಪ್ರಿಲ್ 5 ರಂದು ಬಿಡುಗಡೆಗೆ ಸಜ್ಜಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com