ಅಪ್ಪ ನಾಗಾರ್ಜುನರ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ನಟ ಅಖಿಲ್ ಅಕ್ಕಿನೇನಿ, ಆಗಿದ್ದೇನು? Video

ತಮ್ಮ ನೂತನ ಲೆನಿನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಅಖಿಲ್ ಅಕ್ಕಿನೇನಿ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದು, ತಂದೆ ಹಾಗೂ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರ ಆಶೀರ್ವಾದ ಪಡೆದಿದ್ದಾರೆ.
Emotional Akhil Akkineni seeks Nagarjunas blessings
ತಂದೆ ತಬ್ಬಿ ಬಿಕ್ಕಿ ಬಿಕ್ಕಿ ಅತ್ತ ಅಖಿಲ್ ಅಕ್ಕಿನೇನಿ
Updated on

ಹೈದರಾಬಾದ್: ತೆಲುಗು ಚಿತ್ರರಂಗದ ಖ್ಯಾತ ನಟ ಹಾಗೂ ಕಿಂಗ್ ನಾಗಾರ್ಜುನ ಅವರ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತ ಘಟನೆ ವರದಿಯಾಗಿದೆ.

ಹೌದು.. ತಮ್ಮ ನೂತನ ಲೆನಿನ್ ಚಿತ್ರದ ಯಶಸ್ಸಿನ ಬೆನ್ನಲ್ಲೇ ನಟ ಅಖಿಲ್ ಅಕ್ಕಿನೇನಿ ಭಾವುಕ ಕ್ಷಣವೊಂದನ್ನು ಹಂಚಿಕೊಂಡಿದ್ದು, ತಂದೆ ಹಾಗೂ ಹಿರಿಯ ನಟ ನಾಗಾರ್ಜುನ ಅಕ್ಕಿನೇನಿ ಅವರ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ವೈರಲ್ ಆಗಿರುವ ವಿಡಿಯೊದಲ್ಲಿ, ಚಿತ್ರದ ಯಶಸ್ಸಿನ ಬಳಿಕ ಅಖಿಲ್ ತಮ್ಮ ನಿವಾಸದಲ್ಲಿ ನಾಗಾರ್ಜುನ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಚಿತ್ರತಂಡದೊಂದಿಗೆ ಸೇರಿ ಕೇಕ್ ಕತ್ತರಿಸಿದ್ದಾರೆ.

ಈ ವೇಳೆ ತೀವ್ರ ಭಾವುಕರಾದ ಅಖಿಲ್ ತಮ್ಮ ತಂದೆ ನಾಗಾರ್ಜುನ ಅವರನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಳಿಕ ಕಣ್ಣುಗಳನ್ನು ಒರೆಸಿಕೊಂಡು ಕಾಲಿಗೆ ಬಿದ್ದು ಅವರ ಆಶೀರ್ವಾದ ಪಡೆದರು. ಈ ವೇಳೆ ನಾಗಾರ್ಜುನ ಕೂಡ ಪುತ್ರನನ್ನು ಆತ್ಮೀಯವಾಗಿ ಅಪ್ಪಿಕೊಂಡು ಅಭಿನಂದಿಸಿದ್ದು ಮಾತ್ರವಲ್ಲದೇ ಸಂತೈಸಿದರು.

Emotional Akhil Akkineni seeks Nagarjunas blessings
ಪ್ರಭಾಸ್ ನಟನೆಯ 'Fauzi' ಚಿತ್ರದ ಸೆಟ್‌ನಲ್ಲಿ ನಟ ರಾಜೇಶ್ ಶರ್ಮಾಗೆ ಕೀಟ ಕಡಿತ; ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ!

ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿದ್ದ ಅಖಿಲ್

ಇನ್ನು ನಟ ಅಖಿಲ್ ಅಕ್ಕಿನೇನಿ ಕುಟುಂಬದ ಕುಡಿಯಾದರೂ, ಸಾಕಷ್ಟು ವರ್ಷಗಳಿಂದ ಒಂದು ಗೆಲವಿಗಾಗಿ ಸಾಕಷ್ಟು ಶ್ರಮ ಪಟ್ಟಿದ್ದರು. ತೆಲುಗು ಚಿತ್ರರಂಗದಲ್ಲಿ ದೀರ್ಘಕಾಲದ ಸಿನಿಮಾ ಪರಂಪರೆಯಿದ್ದರೂ ಹೇಳಿಕೊಳ್ಳುವಂತಹ ಯಶಸ್ಸು ಅಖಿಲ್ ಗೆ ಸಿಕ್ಕಿರಲಿಲ್ಲ.

ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಹಲವು ಚಿತ್ರಗಳನೇ ಬಾಕ್ಸಾಫೀಸ್ ನಲ್ಲಿ ಮಕಾಡೆ ಮಲಗಿದ್ದವು. ಮಿಸ್ಟರ್ ಮಜ್ನು, ಏಜೆಂಟ್ ಚಿತ್ರಗಳು ಬ್ಯಾಕ್ ಟು ಬ್ಯಾಕ್ ವಿಫವಾಗಿದ್ದವು. 2021ರಲ್ಲಿ ತೆರೆಕಂಡಿದ್ದ ಮೋಸ್ಟ್ ಎಲೆಜಿಬಲ್ ಬ್ಯಾಚುಲರ್ ಚಿತ್ರ ಒಂದನ್ನು ಹೊರತು ಪಡಿಸಿ ಅವರ ಸಿನಿ ವೃತ್ತಿ ಜೀವನದ ಯಾವುದೇ ಚಿತ್ರ ಹೇಳಿಕೊಳ್ಳುವಂತಹ ಯಶ ಕಂಡಿರಲಿಲ್ಲ.

ಲೆನಿನ್ ಬ್ಲಾಕ್ ಬಸ್ಟರ್

ಈ ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಖಿಲ್ ಗೆ ಇದೀಗ ಲೆನಿನ್ ಚಿತ್ರ ಅದ್ಭುತ ಕಮ್ ಬ್ಯಾಕ್ ನೀಡಿದೆ. ನಿನ್ನೆ ಬಿಡುಗಡೆಯಾದ 'ಲೆನಿನ್' ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಖಿಲ್ ಅವರ ಅಭಿನಯ ಮತ್ತು ಚಿತ್ರದ ಕಥಾಹಂದರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಬಾಕ್ಸ್ ಆಫೀಸ್‌ನಲ್ಲೂ ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದು ಅಖಿಲ್ ಅವರ ವೃತ್ತಿಜೀವನದ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

ಚಿತ್ರಕ್ಕೆ ದೊರೆತ ಬೆಂಬಲಕ್ಕಾಗಿ ಅಖಿಲ್ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದ್ದು, 'ಲೆನಿನ್' ಚಿತ್ರದ ಯಶಸ್ಸು ತಮ್ಮನ್ನು ನಂಬಿದ ಪ್ರತಿಯೊಬ್ಬರಿಗೂ ಸೇರಿದೆ ಎಂದು ಹೇಳಿದ್ದಾರೆ. ಚಿತ್ರದ ಯಶಸ್ಸಿಗೆ ಶ್ರಮಿಸಿದ ಕಲಾವಿದರು ಮತ್ತು ತಾಂತ್ರಿಕ ಸಿಬ್ಬಂದಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಇದೇ ವೇಳೆ, ನಾಗಾರ್ಜುನ ಅವರು 'ಲೆನಿನ್' ಚಿತ್ರದ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿ, ಅಖಿಲ್ ಅವರ ಮುಂದಿನ ಸಿನಿ ಪಯಣ ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಈ ಭಾವುಕ ತಂದೆ-ಮಗನ ಕ್ಷಣವು ಚಿತ್ರದ ಯಶಸ್ಸಿನಷ್ಟೇ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com